ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಡಲ್ಗಳ್ಳರ ಈ ವರ್ಷದ ಆದಾಯ 30ಮಿ.ಡಾಲರ್ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಡಲ್ಗಳ್ಳರ ಈ ವರ್ಷದ ಆದಾಯ 30ಮಿ.ಡಾಲರ್ !
ಅರಾಜಕತೆಯಿಂದ ತತ್ತರಿಸಿರುವ ಸೊಮಾಲಿ ಕರಾವಳಿ ಪ್ರದೇಶದಲ್ಲಿ ಅಟ್ಟಹಾಸಗೈಯುತ್ತಿರುವ ಕಡಲ್ಗಳ್ಳರು ಹಡಗಳನ್ನು ಅಪಹರಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಅಂದಾಜು 25 ರಿಂದ 30ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ಸಂಪಾದಿಸಿರುವುದಾಗಿ ಅಮೆರಿಕದ ಮೂಲಗಳು ತಿಳಿಸಿವೆ.

ಕಾನೂನಿನ ಹಿಡಿತವಿಲ್ಲದ, ಅಭದ್ರತೆಯ ಸೊಮಾಲಿಯ ದೇಶದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರ ಹಾವಳಿ ಮತ್ತು ಶಸ್ತ್ರ ಸಜ್ಜಿತ ದಾಳಿಗಳಿಂದಾಗಿ ವಾಣಿಜ್ಯ ವಹಿವಾಟಿನ ಮೇಲೆ ತೀವ್ರ ತೆರನಾದ ತೊಂದರೆ ಉಂಟಾಗಿರುವುದಾಗಿ ತ್ರೈಮಾಸಿಕ ವರದಿಯೊಂದು ಬಹಿರಂಗಪಡಿಸಿರುವುದಾಗಿ ಯುನೈಟೆಡ್ ನೇಶನ್ಸ್‌ನ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಜನವರಿಯಿಂದ ಆಕ್ಟೋಬರ್‌ವರೆಗೆ, 200ಸಿಬ್ಬಂದಿಗಳು ಹಾಗೂ 65 ಮರ್ಚಂಟ್ ಹಡಗುಗಳನ್ನು ಸೊಮಾಲಿಯ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರು ಅಪಹರಿಸಿರುವುದಾಗಿ ಮೂನ್ ಹೇಳಿದರು.

2008ರ ಆರಂಭದಿಂದ ಅಕ್ಟೋಬರ್‌ವರೆಗೆ ಒಂದು ಅಂದಾಜಿನ ಪ್ರಕಾರ ಕಡಲ್ಗಳ್ಳರು 30ಮಿಲಿಯನ್ ಡಾಲರ್‌ನಷ್ಟು ಹಣವನ್ನು ಅಕ್ರಮವಾಗಿ ಸಂಪಾದಿರುವುದಾಗಿ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಡೋಲಾಯಮಾನ ಸ್ಥಿತಿ ಅನುಭವಿಸುತ್ತಿರುವ ತನ್ಮಧ್ಯೆಯೇ ಸೊಮಾಲಿಯ ಕೂಡ ಆರ್ಥಿಕವಾಗಿ ತುಂಬಾ ದುಸ್ಥಿತಿ ಹೊಂದಿದೆ. ಈ ನಿಟ್ಟಿನಲ್ಲಿ ಸೊಮಾಲಿಯ ಕರಾವಳಿ ಭಾಗದಲ್ಲಿ ಕಡಲ್ಗಳ್ಳರು ನಡೆಸುತ್ತಿರುವ ಹಡಗು ಅಪಹರಣ ಕಾರ್ಯ ದೇಶದ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಮೂನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮಾ 'ಹೌಸ್ ನಿಗ್ರೋ': ಅಲ್ ಜವಾಹರಿ
ಜಾನ್ ಕೇ ನ್ಯೂಜಿಲ್ಯಾಂಡ್‌ ಪ್ರಧಾನಿ
ಶೀಘ್ರವೇ ಎಲ್‌ಟಿಟಿಇ ಮೇಲೆ ನಿಷೇಧ: ಶ್ರೀಲಂಕಾ
ಭಾರತದ ನೌಕದಳದಿಂದ ಕಡಲ್ಗಳ್ಳರ ನೌಕೆ ಧ್ವಂಸ
ಕೀನ್ಯಾ: ಕಡಲ್ಗಳ್ಳರಿಂದ ತೈಲ ನೌಕೆ ಅಪಹರಣ
ಚೀನಾ : ಸುರಂಗ ಕುಸಿತಕ್ಕೆ 21 ಬಲಿ