ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ರವಾಹಕ್ಕೆ ಕ್ಯೂಬಾ ತತ್ತರ: 20ಸಾವಿರ ಜನ ಸ್ಥಳಾಂತರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಹಕ್ಕೆ ಕ್ಯೂಬಾ ತತ್ತರ: 20ಸಾವಿರ ಜನ ಸ್ಥಳಾಂತರ
ಪೂರ್ವ ಕ್ಯೂಬಾದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ನದಿಗಳು ಉಕ್ಕಿಹರಿದಿದ್ದರ ಪರಿಣಾಮ ಪ್ರವಾಹದ ಸ್ಥಿತಿ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 2,000ದಷ್ಟು ಮನೆಗಳು ಮುಳುಗಿ ಹೋಗಿದೆ. ಪರಿಹಾರ ಕಾರ್ಯಚರಣೆಯಲ್ಲಿ 20 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಕ್ಯೂಬಾದ ಸಹಿತ ನೆರೆಯ ಕೆರೆಬಿಯನ್ ದ್ವೀಪಗಳಾದ ಗ್ರೆನೆಡಾ ಮತ್ತು ಜಮೈಕಾದಲ್ಲಿಯ‌ೂ ಸಹ ಭಾರೀ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, ಈವರೆಗೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಿಳಿದು ಬಂದಿಲ್ಲ.

ಪೂರ್ವ ಕ್ಯೂಬಾದ ಹೊಲ್‌ಗೆನ್ ಪ್ರಾಂತ್ಯದಲ್ಲಿ ಸುರಿಯುತ್ತಿರುವ ಜಡಿಮಳೆಗೆ ರಿಯೋ ಗ್ರಾಂಡೆ ನದಿಯು ಉಕ್ಕಿ ಹರಿದ್ದರಿಂದ ಪ್ರವಾಹದ ಸ್ಥಿತಿಯುಂಟಾಗಿದೆ. ಹೊಲ್‌ಗೆನ್ ಪ್ರದೇಶದಲ್ಲಿ ಆರ್ಥಿಕವಾಗಿ ಪ್ರಮುಖವಾದ ಕ್ಷೇತ್ರಗಳಾದ ನಿಕ್ಕಲ್ ಮತ್ತು ಕೊಬಲ್ಟ್ ಗಣಿಗಾರಿಕೆಗೆ ಇದುವರೆಗೆ ಪ್ರವಾಹವು ಭಾದಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದರು.

ಗುಸ್ತಾವ್, ಇಕೆ ಮತ್ತು ಪಾಲೋಮ ಎಂಬ ಮ‌ೂರು ಭೀಕರ ಚಂಡಮೂರುತಗಳು ಇತ್ತೀಚಿಗಿನ ತಿಂಗಳಲ್ಲಿ ಪೂರ್ವ ಕ್ಯೂಬಾವನ್ನು ಕಂಗೆಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಡಲ್ಗಳ್ಳರ ಈ ವರ್ಷದ ಆದಾಯ 30ಮಿ.ಡಾಲರ್ !
ಒಬಾಮಾ 'ಹೌಸ್ ನಿಗ್ರೋ': ಅಲ್ ಜವಾಹರಿ
ಜಾನ್ ಕೇ ನ್ಯೂಜಿಲ್ಯಾಂಡ್‌ ಪ್ರಧಾನಿ
ಶೀಘ್ರವೇ ಎಲ್‌ಟಿಟಿಇ ಮೇಲೆ ನಿಷೇಧ: ಶ್ರೀಲಂಕಾ
ಭಾರತದ ನೌಕದಳದಿಂದ ಕಡಲ್ಗಳ್ಳರ ನೌಕೆ ಧ್ವಂಸ
ಕೀನ್ಯಾ: ಕಡಲ್ಗಳ್ಳರಿಂದ ತೈಲ ನೌಕೆ ಅಪಹರಣ