ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರನ್ನು ಗುರಿಯಾಗಿರಿಸಿಕೊಂಡು ಅಮೆರಿಕ ನಡೆಸುತ್ತಿರುವ ಮಿಸೈಲ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು, ಇದೊಂದು ಸಹಿಸಲಾರದ ಕೃತ್ಯವಾಗಿದೆ ಎಂದು ಹೇಳಿದ್ದಾರೆ.ಪಾಕ್ ನೆಲದಲ್ಲಿ ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ಶೀಘ್ರವೇ ನಿಲ್ಲಿಸುಂತೆ ಒತ್ತಾಯಿಸುವ ಸಲುವಾಗಿ ಪಾಕ್‌ನಲ್ಲಿರುವ ಯುಎಸ್ ರಾಯಭಾರಿ ಅನ್ನೆ ಪ್ಯಾರ್ಟಸನ್ ಅವರೊಂದಿಗೆ ಮಾತುಕತೆ ನಡೆಸಲು ಆಗಮಿಸುವಂತೆ ವಿದೇಶಾಂಗ ಸಚಿವಾಲಯ ಆಹ್ವಾನ ನೀಡಿದೆ.ಅಮೆರಿಕದ ಈ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ, ಈ ದಾಳಿ ದುಸ್ಸಾಹಸತನದ್ದು, ಇದರಿಂದಾಗಿ ಅದು ನಮ್ಮ ತೊಂದರೆಗಳನ್ನು ಮತ್ತಷ್ಟು ಹೆಚ್ಚುಸುತ್ತಿದೆ ಎಂದು ಗಿಲಾನಿ ಅವರು ನ್ಯಾಷನಲ್ ಅಸೆಂಬ್ಲಿಯಲ್ಲಿ ಸದಸ್ಯರು ಬನ್ನು ದಾಳಿ ಕುರಿತು ಧ್ವನಿ ಎತ್ತಿದ್ದಕ್ಕೆ ಪ್ರತಿಯಾಗಿ ಮಾತನಾಡುತ್ತ ಹೇಳಿದರು.ಪಾಕಿಸ್ತಾನದ ವಾಯುವ್ಯ ಭಾಗದ ಬನ್ನು ಜಿಲ್ಲೆಯಲ್ಲಿ ಬುಧವಾರ ಅಮೆರಿಕ ನಡೆಸಿದ ಮಿಸೈಲ್ ದಾಳಿಯಲ್ಲಿ ಅಲ್ ಕೈದಾ ಮುಖಂಡನೊಬ್ಬ ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದರು.ಇದೇ ರೀತಿ ದಾಳಿ ಮುಂದುವರಿಸಿದ್ದೇ ಆದಲ್ಲಿ ನಾವು ಯುಎಸ್ ರಾಯಭಾರಿ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಮಲಿಕ್ ಅಮ್ಮಾದ್ ಅವರು ಅಸೆಂಬ್ಲಿಯಲ್ಲಿ ಮಾತನಾಡುತ್ತ ಎಚ್ಚರಿಕೆ ನೀಡಿದರು. |