ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿನ ಶಂಕಿತ ತಾಲಿಬಾನ್ ಹಾಗೂ ಅಲ್ ಕೈದಾ ಅಡಗುತಾಣಗಳ ಮೇಲೆ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕೆಲವು ಉಜ್ಬೇಕ್ ಕಮಾಂಡರ್ ಸೇರಿದಂತೆ 17ಉಗ್ರಗಾಮಿಗಳು ಬಲಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಪೀಡಿತ ಅಫ್ಘಾನ್ ಗಡಿಭಾಗದ ಬಜೌರ್ ಜಿಲ್ಲೆಯಲ್ಲಿ ಬಂಡುಕೋರರ ವಿರುದ್ಧ ರಾತ್ರಿಯಿಡೀ ಜೆಟ್ ವೈಮಾನಿಕ ಕಾರ್ಯಾಚರಣೆ ಹಾಗೂ ಗುರುವಾರ ಬೆಳಿಗ್ಗೆ ಲಾಂಚರ್ ಮತ್ತು ಮೊರ್ಟಾರ್ ಬಾಂಬ್ ದಾಳಿಯಲ್ಲಿ ಹಲವರು ಸಾವನ್ನಪ್ಪಿರುವುದಾಗಿ ರಕ್ಷಣಾಪಡೆಯ ಅಧಿಕಾರಿಗಳು ಹೇಳಿದ್ದಾರೆ.
ಸಾವನ್ನಪ್ಪಿದವರಲ್ಲಿ ನಾಲ್ಕು ಮಂದಿ ಉಜ್ಬೇಕ್ ಕಮಾಂಡರ್‌ಗಳಾಗಿದ್ದು, ಇದರಲ್ಲಿ ಕೆಲವರು ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಲ್ ಕೈದಾದಿಂದ ತರಬೇತಿ ಪಡೆದ ಉಗ್ರರಾಗಿದ್ದಾರೆ. ಅಲ್ಲದೇ ಬುಡಕಟ್ಟು ಪಡೆಯ ಲಾಷ್ಕರ್ ಸದಸ್ಯರ ಅಪಹರಣದಲ್ಲೂ ಶಾಮೀಲಾಗಿದ್ದರು ಎಂದು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಇಬ್ಬರು ಉಜ್ಬೇಕ್ ಕಮಾಂಡರ್‌ಗಳು ಮಾತ್ರ ಹತರಾಗಿದ್ದಾರೆಂದು ಸರಕಾರದ ಸ್ಥಳೀಯ ಅಧಿಕಾರಿ ಮೊಹಮ್ಮದ್ ಜಮೀಲ್ ಹೇಳಿದ್ದಾರೆ. ದಾಳಿಯಲ್ಲಿ ಒಟ್ಟು ಇಬ್ಬರು ಉಜ್ಬೇಕ್ ಕಮಾಂಡರ್ ಸೇರಿದಂತೆ 17ಮಂದಿ ಸಾವನ್ನಪ್ಪಿರುವುದಾಗಿ ಹೇಳಿದರು. |