ಅಫ್ಘಾನ್‌ನ ಯುದ್ಧ ಪೀಡಿತ ಪ್ರದೇಶದ ಜನರಿಗೆ ಭಾರತೀಯ ವೈದ್ಯರು ಚಿಕಿತ್ಸೆಯನ್ನು ಒದಗಿಸಬೇಕೆಂದು ಅಮೆರಿಕ ಆರೋಗ್ಯ ಮತ್ತು ಮಾನವೀಯ ಸೇವಾ ವಿಭಾಗ(ಎಚ್‌ಎಚ್‌ಎಸ್)ವು ಕೋರಿದೆ.
ಅಮೆರಿಕ ಆರೋಗ್ಯ ಕಾರ್ಯಲಯದ ಸಹ ಕಾರ್ಯದರ್ಶಿಯಾದ ಜೊಸೆಲ್ ಗಾರ್ಸಿಯಾ ಅವರು ಭಾರತೀಯ ಮೂಲದ ಅಮೆರಿಕನ್ ವೈದ್ಯರ ಸಂಘ(ಎಎಪಿಐ)ದೊಂದಿಗಿನ ಮಾತುಕತೆಯ ವೇಳೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆರೋಗ್ಯ ಕಾರ್ಯದಕ್ಷತೆಯ ಭಾಗವಾಗಿ ಅಫ್ಘಾನ್‌ನ ಜನರಿಗೆ ಚಿಕಿತ್ಸೆಯನ್ನು ನೀಡಲು ಎಚ್‌ಎಚ್‍ಎಸ್ ಎಪಿಪಿಐಯೊಂದಿಗೆ ಭಾಗಿಯಾಗಲಿದೆ ಎಂದು ಅವರು ತಿಳಿಸಿದರು.
ಎಚ್‌ಎಚ್‌ಎಸ್ ಸಲಹೆಯನ್ನು ಸ್ವೀಕರಿಸಿ ಕೆಲಸ ಮಾಡುವುದರಿಂದ ಉತ್ತಮ ಅವಕಾಶಗಳು ದೊರೆಯಲಿದೆಯೆಂದು ಸಭೆಯ ಚರ್ಚೆಯ ಸಂದರ್ಭ ಎಎಪಿಐ ಕಾರ್ಯದರ್ಶಿ ಶ್ರೀನಿವಾಸನ್ ತಿಳಿಸಿದರು. |