ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಆಡಳಿತ ಸುಧಾರಣಾ ಸಮಿತಿಗೆ ಭಾರತೀಯ ಮೂಲದ ಸೋನಾಲ್ ಶಾ ಅವರ ಹೆಸರನ್ನು ಬುಧವಾರ ಸೂಚಿಸಿದ್ದು, ಏತನ್ಮಧ್ಯೆ ಸ್ವಯಂಘೋಷಿತ ಭಾರತೀಯ ಜಾತ್ಯತೀತ(ಎಡಪಂಥೀಯ) ಸಂಘಟನೆ ಶಾ ಅವರು ಮೂಲಭೂತವಾದಿ ಹಿಂದೂ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂಬ ಆರೋಪವನ್ನು ಒಮಾಮಾ ನಿರ್ಲಕ್ಷಿಸಿದ್ದಾರೆ.
ಏಳು ಪಾಲಿಸಿ ವರ್ಕಿಂಗ್ ಗುಂಪಿನ ಒಂಬತ್ತು ಮಂದಿ ಮುಖಂಡರಲ್ಲಿ ಶಾ ಅವರು ಒಬ್ಬರಾಗಿದ್ದಾರೆ. ಒಬಾಮಾ ಮತ್ತು ಬಿಡೆನ್ ಆಡಳಿತದಲ್ಲಿನ ಅಭಿವೃದ್ದಿಗೆ ಆದ್ಯತೆ ನೀಡುವ ನೀತಿಯ ಪ್ರಸ್ತಾಪ ಹಾಗೂ ಯೋಜನೆಗಳ ಕುರಿತಾಗಿ ಪ್ರಚಾರ ಕಾರ್ಯ ನಡೆಸಲಿದೆ ಎಂದು ಟ್ರಾನ್ಸಿಷನ್ ತಂಡ ಬುಧವಾರ ಘೋಷಿಸಿದೆ.
ಬುಧವಾರದಂದು ಒಬಾಮಾ ಅವರು ಸಾಂಕೇತಿಕವಾಗಿ ಶ್ವೇತಭವನದಲ್ಲಿನ ಆಡಳಿತ ಯಂತ್ರದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸುವವರ ಹೆಸರನ್ನು ಘೋಷಿಸಲಾಗಿತ್ತು. ಏತನ್ಮಧ್ಯೆ ಶಾ ಅವರ ಹೆಸರನ್ನು ಘೋಷಿಸುತ್ತಿದ್ದಂತೆಯೇ ಎಡಪಂಥೀಯ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಶಾ ಅವರ ಕುಟುಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವಹಿಂದೂ ಪರಿಷತ್‌ನಂತಹ ಹಿಂದೂ ಮೂಲಭೂತವಾದಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಅದು ಆರೋಪಿಸಿದೆ.
ಎಡಪಂಥೀಯ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾ, ಆಡಳಿತದಲ್ಲಿ ಆರ್,ಎಸ್,ಎಸ್. ವಿಎಚ್‌ಪಿಯನ್ನು ವೈಯಕ್ತಿಕವಾಗಿ ಎಳೆದು ತಂದು ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ ಅವರು, ಆ ನಿಟ್ಟಿನಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ನೋವನ್ನುಂಟು ಮಾಡುವುದು, ಹಿಂಸೆ ಮಾಡುವುದು ಹಾಗೂ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುವುದನ್ನು ತಾನು ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಜುಲಿಯಸ್ ಜೆನ್‌ಚೋವಸ್ಕಿ ಮತ್ತು ಬ್ಲೇರ್ ಲೆವಿನ್ ಸೇರಿದಂತೆ ಶಾ ಅವರು ತಂತ್ರಜ್ಞಾನ, ಆವಿಷ್ಕಾರ ಮತ್ತು ಸರಕಾರಿ ಪರಿಷ್ಕೃತ ಆಯೋಗಗಳ ಸಹ ಅಧ್ಯಕ್ಷರಾಗಿದ್ದಾರೆ.
ಉಳಿದಂತೆ ಎಲ್ಲಾ ಪ್ಯಾನಲ್‌ಗಳಿಗೂ ಒಬ್ಬೊಬ್ಬರು ಮುಖ್ಯಸ್ಥರಾಗಿದ್ದಾರೆ. ಆರ್ಥಿಕ-ಡ್ಯಾನಿಯಲ್.ಕೆ.ತಾರುಲ್ಲೊ, ಶಿಕ್ಷಣ-ಲಿಂಡಾ ಡಾರ್ಲಿಂಗ್ ಹಾಮ್ಮೊಂಡ್, ಇಂಧನ ಮತ್ತು ಪರಿಸರ-ಕ್ಯಾರೊಲ್.ಎಂ.ಬ್ರೊನರ್, ಆರೋಗ್ಯ-ಸೆನೆಟರ್ ಟೊಮ್ ಡ್ಯಾಸ್‌ಚ್ಲೆ, ನೀರಾವರಿ-ಟಿ.ಅಲೆಗ್ಸಾಂಡರ್ ಅಲೆನಿಕೊಫ್, ಮಾರಿಯಾನೋ ಪ್ಲೊರೆಂಟಿನೋ, ನ್ಯಾಷನಲ್ ಸೆಕ್ಯುರಿಟಿ-ಜೇಮ್ಸ್ ಬಿ.ಸ್ಟೇನ್‌ಬರ್ಗ್, ಡಾ.ಸುಸಾನ್ ಎ ರೈಸ್ ಸೇರಿದ್ದಾರೆ.
ಸೋನಾಲ್ ಶಾ ಅವರು ಗೂಗಲ್‌ನ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಒಬಾಮಾ ಅವರ ಆಡಳಿತದಲ್ಲಿ ಆಯ್ಕೆಗೊಂಡಿರುವ ಕಾರಣ ರಜೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಶಾ ಅವರು ಹಲವಾರು ಪ್ರತಿಷ್ಥಿತ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು. |