ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಹತ್ತು ದಿನಗಳ ಕಾಲ ಮುಂದೂಡುವ ಮೈತ್ರಿಕೂಟ ರಾಜಕೀಯ ಪಕ್ಷಗಳೊಂದಿಗೆ ಕೈ ಜೋಡಿಸುವುದಾಗಿ ಮಾಜಿ ಪ್ರದಾನಿ ಖಲೀದಾ ಜಿಯಾ ಅವರು ಗುರುವಾರ ರಾತ್ರಿ ಘೋಷಿಸಿದ್ದಾರೆ.
ಡಿಸೆಂಬರ್ 28ರಂದು ನಡೆಯಲಿರುವ ಚುನಾವಣೆಯಲ್ಲಿ ನಾವು ಭಾಗಿಯಾಗಲಿರುವುದಾಗಿ ಬಾಂಗ್ಲಾದೇಶಿ ನ್ಯಾಷನಲಿಸ್ಟ್ ಪಕ್ಷದ ವರಿಷ್ಠೆ ಜಿಯಾ ಹೇಳಿದರು.
ಏತನ್ಮಧ್ಯೆ ಮಿಲಿಟರಿ ಆಡಳಿತ ರಾಜ್ಯದ ಮೇಲೆ ಹೇರಿರುವ ತುರ್ತುಪರಿಸ್ಥಿತಿಯನ್ನು ವಾಪಸ್ ತೆಗೆದುಕೊಳ್ಳಲು ಜಿಯಾ ಅವರು 48ಗಂಟೆಗಳ ಕಾಲ ಗಡುವು ವಿಧಿಸಿದ್ದು, ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು. ಇದೀಗ ಜಿಯಾ ನೀಡಿದ ಗಡುವು ಬುಧವಾರ ರಾತ್ರಿ ಮುಕ್ತಾಯಗೊಂಡಿದೆ.
ಬಾಂಗ್ಲಾದಲ್ಲಿ ಡಿಸೆಂಬರ್ 18ರಂದು ಹಾಗೂ 28ರಂದು ಸಾರ್ವತ್ರಿಕ ಚುನಾವಣೆ ನಡೆಯಲಿರುವುದಾಗಿ ಆಂತರಿಕ ಆಡಳಿತ ಈಗಾಗಲೇ ಘೋಷಣೆ ಹೊರಡಿಸಿದ್ದು, ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.
ಮುಕ್ತ ಚುನಾವಣೆ ನಡೆಸುವ ಮುನ್ನ ರಾಜ್ಯದಲ್ಲಿ ಹೇರಿರುವ ತುರ್ತುಪರಿಸ್ಥಿತಿಯನ್ನು ವಾಪಸ್ ತೆಗೆಯುವಂತೆ ಆಗ್ರಹಿಸಿರುವ ಜಿಯಾ, ಈ ಕುರಿತು ಮಿಲಿಟರಿ ಆಡಳಿತ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದರು. |