ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್: ಶವ ಮೆರವಣಿಗೆ ವೇಳೆ ಸ್ಫೋಟ- 6ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: ಶವ ಮೆರವಣಿಗೆ ವೇಳೆ ಸ್ಫೋಟ- 6ಬಲಿ
ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಶುಕ್ರವಾರ ಶವ ಸಂಸ್ಕಾರಕ್ಕಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡ ಪರಿಣಾಮ ಆರು ಮಂದಿ ಬಲಿಯಾಗಿದ್ದು, 15ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಗುರುವಾರ ವಾಯುವ್ಯ ನಗರದಲ್ಲಿ ಸ್ಥಳೀಯ ಶಿಯಾ ಪಂಗಡದ ದೇರಾ ಇಸ್ಮಾಯಿಲ್ ಖಾನ್ ಎಂಬಾತ ಗುಂಡೇಟಿಗೆ ಬಲಿಯಾಗಿದ್ದ. ಈ ಘಟನೆ ನಡೆದ ಬೆನ್ನಲ್ಲೇ ಸುನ್ನಿ ಮತ್ತು ಶಿಯಾ ನಡುವೆ ಹಿಂಸಾಚಾರ ತಲೆದೋರಿತ್ತು.

ಶುಕ್ರವಾರ ಬೆಳಿಗ್ಗೆ ಇಸ್ಮಾಯಿಲ್ ಖಾನ್ ಶವ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಪ್ರಬಲ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ಖುರ್ಷಿದ್ ಖಾನ್ ತಿಳಿಸಿದ್ದಾರೆ.

ಪಾಕಿಸ್ತಾನದಾದ್ಯಂತ 160ಮಿಲಿಯನ್ ಪ್ರಾಬಲ್ಯ ಹೊಂದಿರುವ ಸುನ್ನಿ ಪಂಗಡದಲ್ಲಿ, ಶಿಯಾಗಳು ಶೇ.20ರಷ್ಟಿದ್ದಾರೆ. ಆದರೆ ಕಳೆದ ಎರಡು ದಶಕಗಳಿಂದ ಸುನ್ನಿ ಮತ್ತು ಶಿಯಾ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಂಗ್ಲಾ: ಚುನಾವಣೆ ಮುಂದೂಡಿಕೆಗೆ ಜಿಯಾ ಆಗ್ರಹ
'ಜಾತ್ಯತೀತ'ರ ದೂರನ್ನು ಕಡೆಗಣಿಸಿದ ಒಬಾಮಾ...
ಅಫ್ಘಾನ್‌‌ನಲ್ಲಿ ವೈದ್ಯ ಸೇವೆಗೆ ಭಾರತೀಯರಿಗೆ ಮನವಿ
ಪಾಕ್: ವೈಮಾನಿಕ ದಾಳಿಗೆ 17 ಉಗ್ರರು ಬಲಿ
ಅಮೆರಿಕದ ದಾಳಿ ದುಸ್ಸಾಹಸತನದ್ದು: ಪಾಕ್
ಥಾಯ್‌ಲ್ಯಾಂಡ್: ಗ್ರೇನೆಡ್ ದಾಳಿಗೆ ಓರ್ವ ಬಲಿ