ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮೈಕೆಲ್ ಜಾಕ್ಸನ್ ಇಸ್ಲಾಂಗೆ ಮತಾಂತರ: ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಕೆಲ್ ಜಾಕ್ಸನ್ ಇಸ್ಲಾಂಗೆ ಮತಾಂತರ: ವರದಿ
ಖ್ಯಾತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಅವರು ಸ್ವ ಇಚ್ಚೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ತಮ್ಮ ಹೆಸರನ್ನು ಮೈಕೀಲ್ ಎಂದು ಬದಲಾಯಿಸಿಕೊಂಡಿದ್ದಾರೆ.

50ಹರೆಯದ ಖ್ಯಾತ ಗಾಯಕ ಜಾಕ್ಸನ್ ಅವರು ಲಾಸ್ ಏಂಜಲೀಸ್‌ನಲ್ಲಿ ತಮ್ಮ ಆಪ್ತ ಗೆಳೆಯರೊಂದಿಗೆ ಕುರಾನ್ ಸಮಾರಂಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಸನ್ ವರದಿ ಬಹಿರಂಗಪಡಿಸಿದೆ.

ಇದೀಗ ಸ್ಟಾರ್ ಆಗಿದ್ದ ಜಾಕ್ಸನ್ ಅವರು ಹೊಸ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿರುವುದಾಗಿ ವರದಿ ಹೇಳಿದೆ. ಆ ನಿಟ್ಟಿನಲ್ಲಿ ಇಮಾಮ್ ಅವರ ಮೂಲಕ ಸಂಪ್ರದಾಯಬದ್ದವಾಗಿ ಕುರಾನ್ ಪಠಿಸುವ ಮೂಲಕ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ವಿವರಿಸಿದೆ.

ತನಗೆ ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ತಾನು ಮತಾಂತರಗೊಂಡ ನಂತರವೂ ಕೂಡ ಜನರೊಂದಿಗೆ ಮೊದಲಿನಂತೆ ಬೆರೆಯುವುದಾಗಿ ತಿಳಿಸಿದರು.

ಇಮಾಮ್ ಅವರ ಆದೇಶದ ಮೇರೆಗೆ ಮಸೀದಿ ತೆರಳಿದ ಜಾಕ್ಸನ್ ಅವರು, ಅಲ್ಲಾನ ಹೆಸರಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ತಮ್ಮ ಹೆಸರನ್ನು ಮೈಕೀಲ್ ಎಂದು ಬದಲಾಯಿಸಿಕೊಂಡಿದ್ದಾರೆ. ಮಿಕೇಲ್ ಎಂಬ ಹೆಸರು ಅಲ್ಲಾನ ಅನುಯಾಯಿಗಳಲ್ಲಿ ಒಬ್ಬರ ಹೆಸರಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್: ಶವ ಮೆರವಣಿಗೆ ವೇಳೆ ಸ್ಫೋಟ- 6ಬಲಿ
ಬಾಂಗ್ಲಾ: ಚುನಾವಣೆ ಮುಂದೂಡಿಕೆಗೆ ಜಿಯಾ ಆಗ್ರಹ
'ಜಾತ್ಯತೀತ'ರ ದೂರನ್ನು ಕಡೆಗಣಿಸಿದ ಒಬಾಮಾ...
ಅಫ್ಘಾನ್‌‌ನಲ್ಲಿ ವೈದ್ಯ ಸೇವೆಗೆ ಭಾರತೀಯರಿಗೆ ಮನವಿ
ಪಾಕ್: ವೈಮಾನಿಕ ದಾಳಿಗೆ 17 ಉಗ್ರರು ಬಲಿ
ಅಮೆರಿಕದ ದಾಳಿ ದುಸ್ಸಾಹಸತನದ್ದು: ಪಾಕ್