ಕಡಲ್ಗಳ್ಳರು ಸೊಮಾಲಿ ಕರಾವಳಿ ಪ್ರದೇಶದಲ್ಲಿ ನಡೆಸುತ್ತಿರುವ ಹಡಗುಗಳ ಅಪಹರಣವನ್ನು ಖಂಡಿಸಿದ ದಕ್ಷಿಣ ಆಫ್ರಿಕಾ , ಕುರಿತು ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿಯ ಮಹಾಸಭೆಯಲ್ಲಿ(ಯುಎನ್‌ಎಸ್‌ಸಿ) ಈ ವಿಷಯದ ಕುರಿತು ಧ್ವನಿ ಎತ್ತುವುದಾಗಿ ಶುಕ್ರವಾರ ತಿಳಿಸಿದೆ.
ವಿಶ್ವ ಸಂಸ್ಥೆಯ ರಾಜಕೀಯ ವ್ಯವಹಾರದ ಜವಾಬ್ದಾರಿ ಹೊತ್ತಿರುವ ಹಾಗೂ ವಿದೇಶಿ ವ್ಯವಹಾರ ವಿಭಾಗದ ಮುಖ್ಯ ನಿರ್ದೇಶಕನಾಗಿರುವ ಒಲಿಸಾ ಮಾಬೊಂಗೊರವರು ಸೊಮಾಲಿ ತೀರದ ಅಭದ್ರತೆಯ ಪರಿಸ್ಥಿತಿಗೆ ಪ್ರತಿಕ್ರಿಯಿಸಿತ್ತಾ, ಇದು ವಿಶ್ವ ರಾಷ್ಟ್ರಗಳ ವಾಣಿಜ್ಯ ವ್ಯವಹಾರಕ್ಕೆ ತೀವ್ರತೆರನಾದ ಭೀತಿಯನ್ನು ಒಡ್ಡಿರುವುದಾಗಿ ಹೇಳಿದರು.
ಸೊಮಾಲಿ ತೀರ ಪ್ರದೇಶದಲ್ಲಿ ಕಡಲ್ಗಳ್ಳರು ನಡೆಸುತ್ತಿರುವ ಅಪಹರಣಕ್ಕೆ ಕಾನೂನು ಅಭದ್ರತೆಯೇ ಪ್ರಮುಖ ಕಾರಣವಾಗಿದ್ದು, ಇದು ಈಗೆಯೇ ಮುಂದುವರಿದರೆ ದೊಡ್ಡ ತೊಡಕಾಗಿ ಪರಿಣಮಿಸಲಿದೆಯೆಂದು ಮೂಬೊಂಗೊ ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದರು.
ಯುನ್‌ಎನ್‌ಜಿಸಿ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜಕೀಯ ಶಕ್ತಿ ನೆರವಿನಿಂದ ಶ್ರಮಿಸಲಿದೆ ಎಂದು ಹೇಳಿದರು. ದೇಶದ ಅರಾಜಕತೆಯ ರಾಜಕೀಯವನ್ನು ಕೇಂದ್ರಿಕರಿಸಿರುವ ಹಿಂದಿನ ಪ್ರಧಾನ ಸಮಸ್ಯೆಯ ಮೇಲೆ ಗಮನಹರಿಸಬೇಕೆಂದು ಅವರು ತಿಳಿಸಿದರು. |