ಕಳೆದ ತಿಂಗಳಿನಿಂದ ಏಕಾಏಕಿ ಕಾಣಿಸಿಕೊಂಡ ಕಾಲರಾ ಎಂಬ ಮಾರಕ ರೋಗಕ್ಕೆ ಇದುವರೆಗೆ 90 ಜನರು ಬಲಿಯಾಗಿದ್ದು, ಇವರಲ್ಲಿ ದಕ್ಷಿಣ ಆಫ್ರಿಕಾ ಗಡಿಯಾಚಿಗಿನ ಪ್ರದೇಶದ ಮೂವರು ಜಿಂಬಾಬ್ವೆ ಪ್ರಜೆಗಳು ಸಹ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದರು.
ದಕ್ಷಿಣ ಆಫ್ರಿಕಾದ ಗಡಿ ಭಾಗದ ಜಿಂಬಾಬ್ವೆ ಪಟ್ಟಣ ಪ್ರದೇಶದ ಬೈಟ್‌ಬ್ರಿಡ್ಜ್‌ನಲ್ಲಿ 37 ಮಂದಿ ಕಾಲರಾ ರೋಗಕ್ಕೆ ಬಲಿಯಾಗಿದ್ದಾರೆಂದು ಆರೋಗ್ಯ ಮಂತ್ರಿ ಡೇವಿಡ್ ಪರಿರೆನ್ಯಟ್ವಾ ರಾಷ್ಟ್ರೀಯ ರೆಡಿಯೋ ವಾಹಿನಿಯೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಜಿಂಬಾಬ್ವೆ ರಾಜಧಾನಿಯಾದ ಹರಾರೆಯಲ್ಲಿ ರೋಗಕ್ಕೆ ಬಲಿಯಾದವರ ಸಂಖ್ಯೆ 37ಕ್ಕೆ ಏರಿದ್ದು, ಮಧ್ಯ ಪಟ್ಟಣವಾದ ಗ್ವೆರುವಿನಲ್ಲಿ 13 ಮಂದಿ ಬಲಿಯಾಗಿದ್ದರೆಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಪಟ್ಟಣದ ಮ್ಯೂಸಿನ ಗಡಿ ಪ್ರದೇಶದಲ್ಲಿ ಮೂವರು ಜಿಂಬಾಬ್ವೆ ಪ್ರಜೆಗಳು ಸಾವಿಗೀಡಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಕೇವಲ ಹರಾರೆ ಪ್ರದೇಶವೊಂದರಲ್ಲೇ 1.4 ದಶಲಕ್ಷ ಮಂದಿ ಕಾಲರಾ ರೋಗ ಬಾಧೆಗೆ ಒಳಗಾಗಿರುವುದಾಗಿ ವೈದ್ಯರ ಸಂಘ ಮಂಗಳವಾರ ಎಚ್ಚರಿಸಿದ್ದು, ಇದು ದರ್ಬಾನ್‌ನಿಂದ ದಕ್ಷಿಣ ಆಫ್ರಿಕಾದ ಆಗ್ನೇಯ ಭಾಗದ ತೀರ ಪ್ರದೇಶದಲ್ಲಿಯೂ ಸಹ ಹಬ್ಬುತ್ತಿರುವುದಾಗಿ ಹೇಳಿದ್ದಾರೆ. |