ಗಲ್ಫ್ ಆಫ್ ಆಡೆನ್‌ನಲ್ಲಿ ಭಾರತ ಮತ್ತು ರಷ್ಯಾ ರಾಷ್ಟ್ರಗಳ ಶಸ್ತ್ರ ಸಜ್ಜಿತ ನೌಕಸಮರಾಭ್ಯಾಸ ಕಾರ್ಯತಂತ್ರ ಪ್ರೋತ್ಸಾಹಿಸುವುದರೊಂದಿಗೆ ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಅಂಗವಾಗಿ ಮುಂದಿನ ವರ್ಷದ ಜನವರಿ ತಿಂಗಳಲ್ಲಿ "ಇಂದ್ರ-2009" ಎಂಬ ನೌಕಾ ಸಮರಾಭ್ಯಾಸವನ್ನು ಜಂಟಿಯಾಗಿ ಹಿಂದೂ ಮಹಾ ಸಾಗರದಲ್ಲಿ ನಡೆಸಲಿದೆ.
ವ್ಲಾದಿಕ್ಲೊವಸ್‌ನಿಂದ ಡಿಸೆಂಬರ್‌ನಲ್ಲಿ ಸಂಚಾರ ಆರಂಭಿಸುವ ರಷ್ಯಾ ಕಾರ್ಯಭಾರದ ಫೆಸಿಫಿಕ್ ಫ್ಲೀಟ್‌ನ್ನು ವಾರ್ಯಗ್ ಮಿಸೈಲ್ ಯುದ್ಧನೌಕೆಯು ಮುನ್ನಡೆಸುತ್ತಿದ್ದು, ಜನವರಿಯಲ್ಲಿ ಭಾರತ ನೌಕಾ ಸೇನೆಯೊಂದಿಗೆ ಹಿಂದೂ ಮಹಾ ಸಾಗರದಲ್ಲಿ ಜಂಟಿ ನೌಕಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆಯೆಂದು ಆರ್‌ಐಎ ನೊವೊಸ್ತಿಯ ಹೇಳಿಕೆಯನ್ನು ಫ್ಲೀಟ್ ವಕ್ತಾರನಾದ ಕ್ಯಾಪ್ಟನ್ ರೊಮನ್ ಮರ್‌ತೊವ್ ತಿಳಿಸಿದರು.
ಎರಡು ದೇಶಗಳೊಳಗಿನ 2003ರ ದ್ವಿಪಕ್ಷೀಯ ಒಡಂಬಡಿಕೆ ನಂತರ ನಡೆಯಲಿರುವ ನಾಲ್ಕನೇ ನೌಕಾಭ್ಯಾಸವಾಗಲಿದೆ. ಇದರ ಮೊದಲು ಕಳೆದ ವರ್ಷ ಜಪಾನ್‌ನಲ್ಲಿ ಸಂಯುಕ್ತವಾಗಿ ನೌಕಾಭ್ಯಾಸವನ್ನು ಕೈಗೊಳ್ಳಲಾಗಿತ್ತು.
ಜನವರಿಯಲ್ಲಿ ಭಾರತ ಮತ್ತು ರಷ್ಯಾ ಕೈಗೊಳ್ಳುವ ಸಂಯುಕ್ತ ನೌಕಾಭ್ಯಾಸದಲ್ಲಿ ಕಡಲ್ಗಳ್ಳರ ವಿರುದ್ಧದ ಕಾರ್ಯಚರಣೆಯಲ್ಲದೆ ಭಯೋತ್ಪಾದನೆ ಮತ್ತು ಡ್ರಗ್ಸ್ ಕಳ್ಳ ಸಾಗಣಿಕೆಯ ವಿರುದ್ಧದ ಸಮರಾಭ್ಯಾಸ ನಡೆಸಲಿದೆ. |