ಭಾರತ ಮತ್ತು ಚೀನಾ ದೇಶಗಳು 2025ರ ಕಾಲಘಟ್ಟದಲ್ಲಿ ಪ್ರಮುಖ ಶಕ್ತಿಗಳಾಗಿ ಹೊರಹೊಮ್ಮಲಿದ್ದು, ಇದು ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಹೊಸ ಹಕ್ಕು ಮತ್ತು ನಿಯಮಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಿದೆ ಎಂದು ಅಮೆರಿಕ ಗುಪ್ತಚರ ಇಲಾಖೆಯ ವರದಿ ಬಹಿರಂಗಪಡಿಸಿದೆ.
ಹಣ ದುಬ್ಬರ ಮತ್ತು ಸಾಮಾಜಿಕ ಅಡಚಣೆಗಳನ್ನು ದೂರಿಕರಿಸುವುದರಲ್ಲಿ ಭಾರತ ಮತ್ತು ಚೀನಾ ದೇಶಗಳು ಮೇಲುಗೈ ಸಾಧಿಸಿ ಇದೇ ರೀತಿ ಮುನ್ನಡೆದರೆ ಪ್ರಮುಖ ಶಕ್ತಿಗಳಾಗಿ ಹೊರಹೊಮ್ಮಲಿದೆಯೆಂದು ಅಮೆರಿಕ ಗುಪ್ತಚರ ಸಂಸ್ಥೆಯ ನಿರ್ದೇಶನಾಲಯವು ವರದಿ ಹೇಳಿದೆ.
"ಜಾಗತಿಕ ಪ್ರವೃತ್ತಿಯ ಪರಿವರ್ತಿತ ಜಗತ್ತು-2025" ಎಂಬ ಶೀರ್ಷಿಕೆ ನೂತನ ವಿಶ್ಲೇಷಣೆಯು ಅಮೆರಿಕ ನೂತನ ಅಧ್ಯಕ್ಷ ಪದವಿ ವಹಿಸಿಕೊಳ್ಳುವ ಬರಾಕ್ ಒಬಾಮಾ ಆಡಳಿತದಲ್ಲಿ ಪ್ರಕಟವಾಗಲಿದೆ. ಮುಂದಿನ ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಇದೇ ಸ್ಥಿತಿ ಮುಂದುವರಿದರೆ ಚೀನಾವು ಆರ್ಥಿಕವಾಗಿ ಪ್ರಪಂಚದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮುವುದಲ್ಲದೆ ಸೈನ್ಯ ಬಲದಲ್ಲಿ ಪ್ರಮುಖ ಸ್ಥಾನ ಪಡೆಯಲಿದೆಯೆಂದು ವರದಿ ತಿಳಿಸಿದೆ.
ಅಮೆರಿಕವು 2025ರ ವೇಳೆಗೆ ನಂಬರ್ ವನ್ ದೇಶವಾಗಿ ಉಳಿಯಲಿದ್ದು, ಆದರೆ ಹೊಸ ದೇಶಗಳ ಪಾದಾರ್ಪಣೆಯೊಂದಿಗೆ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಅಮೆರಿಕದ ಶಕ್ತಿ ಕುಂದಲಿದೆ.
ಮುಂದಿನ ಎರಡು ದಶಕಗಳಲ್ಲಿ ಭಾರತವು ಆರ್ಥಿಕವಾಗಿ ಕ್ಷಿಪ್ರ ಗತಿಯ ಆರ್ಥಿಕ ಬೆಳವಣಿಗೆಯು ಕಾಣಲಿದ್ದು, ಆದರೆ ಸ್ವಾತಂತ್ರ್ಯ ನಂತರ ದೇಶಕ್ಕೆ ಪ್ರಾದೇಶಿಕ ಹಾಗೂ ಜನಾಂಗದ ಪ್ರತಿಭಟನೆಯು ಪಿಡುಗಾಗಿ ಪರಿಣಮಿಸಿದೆ, ಇದನ್ನು ತಡೆಯುವ ಅವಶ್ಯಕತೆಯಿದೆಯೆಂದು ಮುನ್ನಚ್ಚೆರಿಕೆ ನೀಡಿದೆ. |