ಇಸ್ಲಾಂ ಸಮುದಾಯ ಪುರಾತನ ದೈಹಿಕ ವ್ಯಾಯಾಮ ಕಲೆಯಾದ ಯೋಗಾಭ್ಯಾಸ ಮಾಡದಂತೆ ಮಲೇಷ್ಯಾದ ಇಸ್ಲಾಂ ಮಂಡಳಿ ಶನಿವಾರ ನಿಷೇಧ ಹೇರಿದೆ.
ಇಸ್ಲಾಂ ಸಮುದಾಯ ಯೋಗಾಭ್ಯಾಸ ತರಬೇತಿ ಮಾಡುವುದನ್ನು ಇಸ್ಲಾಂಗೆ ಸಮ್ಮತವಾದುದಲ್ಲ, ಆ ಹಿನ್ನೆಲೆಯಲ್ಲಿ ಮುಸ್ಲಿಂ ಯೋಗಾಭ್ಯಾಸ ಮಾಡದಂತೆ ನ್ಯಾಷನಲ್ ಫತ್ವಾ ಮಂಡಳಿ ಧಾರ್ಮಿಕ ನಿಷೇಧ ಹೇರಿರುವುದಾಗಿ ತಿಳಿಸಿದೆ.
ದೈಹಿಕ ವ್ಯಾಯಾಯಮದ ಯೋಗಾಭ್ಯಾಸ ತರಬೇತಿ ಕೈಗೊಳ್ಳುವುದನ್ನು ಮುಸ್ಲಿಂರಿಗೆ ನಿಷೇಧ ಎಂದು ಹೇಳಿರುವ ಇಸ್ಲಾಂ ವರಿಷ್ಠ ಮಂಡಳಿ ಈ ಮೊದಲೇ ನಿಷೇಧ ಹೇರಿತ್ತಾದರೂ ಇದೀಗ ಅಧಿಕೃತವಾಗಿ ಘೋಷಣೆ ಹೊರಡಿಸಿದೆ.
ಜಾಗತಿಕವಾಗಿ ಖ್ಯಾತವಾಗಿರುವ ಯೋಗವನ್ನು ಹಲವು ಮುಸ್ಲಿಂರು ಕೂಡ ತರಬೇತಿ ಪಡೆಯುತ್ತಿದ್ದು, ಇದು ಹಿಂದೂ ಧರ್ಮದ ಭಾಗವಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ದುಲ್ ಶೂಕೊರ್ ಹುಸೈನ್ ತಿಳಿಸಿದ್ದಾರೆ.
ಯೋಗದ ಮೂಲ ಹಿಂದುಧರ್ಮವಾಗಿದ್ದು, ಯೋಗಾಭ್ಯಾಸದ ಮೂಲ ಆಂತರಿಕ ಶಾಂತಿ ಪಡೆಯುವುದಾಗಿದೆ. ಆ ನಿಟ್ಟಿನಲ್ಲಿ ಇದು ಮುಸ್ಲಿಂರ ಧಾರ್ಮಿಕ ನಂಬಿಕೆಯನ್ನೇ ನಾಶಗೊಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರು ಯೋಗಾಭ್ಯಾಸದ ತರಬೇತಿ ಪಡೆಯುವುದು ಇಸ್ಲಾಂಗೆ ವಿರೋಧವಾಗಿರುವ ಹಿನ್ನೆಲೆಯಲ್ಲಿ, ಮುಸ್ಲಿಂರು ಯೋಗಾಭ್ಯಾಸದ ತರಬೇತಿ ಪಡೆಯುವುದನ್ನು ನಿಲ್ಲಿಸಬೇಕೆಂದು ಇತ್ತೀಚೆಗಷ್ಟೇ ಇಸ್ಲಾಂ ಮುಖಂಡರು ಸಲಹೆ ನೀಡಿದ್ದರು. |