ಜಿಂಬಾಬ್ವೆಯ ರಾಬರ್ಟ್ ಮುಗಾಬೆ ಸರಕಾರ ದೇಶಕ್ಕೆ ಭೇಟಿ ನೀಡುವುದಕ್ಕೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಶನಿವಾರ ತಮ್ಮ ಯೋಜಿತ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಹಿರಿಯ ಮುತ್ಸದ್ದಿಗಳಾದ ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್, ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮತ್ತು ನೆಲ್ಸನ್ ಮಂಡೇಲಾರ ಪತ್ನಿ ಗ್ರಾಕಾ ಮೆಕೆಲ್, ಜಿಂಬಾಬ್ವೆಯ ಸ್ಥಿತಿಗತಿಯನ್ನು ಪರಿಶೀಲಿಸಲು ಶನಿವಾರ ಭೇಟಿ ನೀಡಲು ಯೋಜಿಸಿದ್ದರು.
ಶನಿವಾರ ಬೆಳಿಗ್ಗೆಯಿಂದ ಆರಂಭವಾಗಲಿರುವ ಜಿಂಬಾಬ್ವೆ ಭೇಟಿಗಾಗಿ ನಾವೆಲ್ಲ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವು. ಆದರೆ ಅಲ್ಲಿನ ಸರಕಾರವು ಭೇಟಿ ಅವಕಾಶ ನೀಡಲು ನಿರಾಕರಿಸಿದ ಕಾರಣ ಭೇಟಿಯನ್ನು ರದ್ದುಗೊಳಿಸಲಾಯಿತು ಎಂದು ಅನ್ನಾನ್ ಜೋಹಾನ್ಸ್‌ಬರ್ಗ್‌ಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಜಿಂಬಾಬ್ವೆ ಪ್ರವಾಸಕ್ಕಾಗಿನ ವೀಸಾ ನೀಡಲು ಅಲ್ಲಿನ ಸರಕಾರವು ನಿರಾಕರಿಸಿದೆ ಎಂದು ಅವರು ತಿಳಿಸಿದರು. |