ಅಫ್ಘಾನಿಸ್ಥಾನದ ಸುರಕ್ಷತೆ ಹಾಗೂ ಅಲ್ಲಿನ ಭಯೋತ್ಪಾದನೆ ವಿರುದ್ಧ ಹೋರಾಡಲು ಮೊದಲ ಆದ್ಯತೆ ನೀಡುವುದಾಗಿ ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ವಿಜಯಿಯಾದ ಬರಾಕ್ ಒಬಾಮ ಭಾನುವಾರದಂದು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಅವರಿಗೆ ಭರವಸೆ ನೀಡಿರುವುದಾಗಿ ಅಫ್ಘಾನ್ ಅಧ್ಯಕ್ಷರ ನಿಕಟಮೂಲಗಳು ತಿಳಿಸಿವೆ.
ಒಬಾಮ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಅಫ್ಘಾನ್ ಮೇಲೆ ಪ್ರತ್ಯೇಕ ದೃಷ್ಠಿ ಹಾಯಿಸುವುದಾಗಿ ವಾಗ್ದಾನ ನೀಡಿದ್ದಾರೆ. ಆದರೆ ಭ್ರಷ್ಟಾಚಾರವನ್ನು ಎದುರಿಸುವಲ್ಲಿ, ಡ್ರಗ್ಸ್ ಕಳ್ಳಸಾಗಣಿಕೆಯಲ್ಲಿನ ಹೆಚ್ಚಳ ಮತ್ತು ಸೈನ್ಯದ ಸಮರ್ಥ ನಿರ್ವಹಣೆ ಮಾಡಲು ಕರ್ಜಾಯ್ ಪೂರ್ಣವಾಗಿ ವಿಫಲರಾಗಿದ್ದರು ಎಂದು ಆರೋಪಿಸಲಾಗಿದೆ.
ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಫ್ಘಾನ್ ಸರಕಾರದೊಂದಿಗೆ ಅಮೆರಿಕವು ಹೆಚ್ಚಿನ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಿದೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಿದೆಯೆಂಬ ಆಶ್ವಾಸನೆ ಮೂತುಗಳನ್ನು ಒಬಾಮ ನೀಡಿದ್ದಾರೆ.
ಆ ನಿಟ್ಟಿನಲ್ಲಿ ಸ್ಥಿರ ಸರಕಾರ ಹಾಗೂ ಅಫ್ಘಾನ್ ಜನತೆಗೆ ಹೆಚ್ಚಿನ ರಕ್ಷಣೆ ನೀಡಲು ಭದ್ರತೆಯನ್ನು ಅಮೆರಿಕ ಹೆಚ್ಚಿಸಲಿದೆ ಎಂದು ಒಬಾಮ ತಿಳಿಸಿರುವುದಾಗಿ ಇಬ್ಬರು ಅಧ್ಯಕ್ಷರು ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ಅಫ್ಘಾನ್ ಅಧ್ಯಕ್ಷರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |