ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಲ್ ಕೈದಾಕ್ಕೆ ಲಾಡೆನ್ ಪುತ್ರನ ಬೆಂಬಲ: ಟೆಲಿಗ್ರಾಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಲ್ ಕೈದಾಕ್ಕೆ ಲಾಡೆನ್ ಪುತ್ರನ ಬೆಂಬಲ: ಟೆಲಿಗ್ರಾಫ್
ಅಲ್ ಕೈದಾ ಹಾಗೂ ಇರಾನಿಯನ್ ರೆವಲ್ಯೂಶನರಿ ಗಾರ್ಡ್‌ನ ಖುದಾ ಸಂಘಟನೆಗಳೊಂದಿಗೆ ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಪುತ್ರ ಸಾದ್ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದಾನೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಯೆಮೆನ್‌ನಲ್ಲಿ ಅಲ್ ಕೈದಾ ದುಷ್ಕೃತ್ಯಗಳನ್ನು ಎಸಗಲು ಖುದಾ ಉಗ್ರಗಾಮಿ ಸಂಘಟನೆ ಬೆಂಬಲ ನೀಡುತ್ತಿದ್ದು, ಇದಕ್ಕೆ ತೆಹ್ರಾನ್‌ನಲ್ಲಿರುವ ಸಾದ್ ಬಿನ್ ಲಾಡೆನ್‌ನ ಕಚೇರಿಯಿಂದಲೇ ನೆರವು ನೀಡಲಾಗುತ್ತಿದೆ ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಬಹಿರಂಗಪಡಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯೆಮೆನ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದಿದ್ದು, ಇದರಲ್ಲಿ 16 ಜನರು ಬಲಿಯಾಗಿದ್ದರು. ಈ ದಾಳಿ ಹಿಂದೆ ಇರಾನ್ ಪ್ರಮುಖ ಪಾತ್ರ ವಹಿಸಿರುವುದಾಗಿ ಟೆಲಿಗ್ರಾಫ್ ವರದಿ ಆರೋಪಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯೂಜೆರ್ಸಿ: ಭಾರತೀಯನಿಂದ ಪತ್ನಿ ಹತ್ಯೆ
ಅಫ್ಘಾನ್‌ ಸುರಕ್ಷತೆಗೆ ಮೊದಲ ಆದ್ಯತೆ : ಒಬಾಮ
ಐಎಸ್ಐ ರಾಜಕೀಯ ಘಟಕ ವಿಸರ್ಜನೆ
ಡಿಸೆಂಬರ್‌ನಲ್ಲಿ ಮೆಕೇನ್ ಬಾಂಗ್ಲಾಕ್ಕೆ ಭೇಟಿ
ಪಾಕ್‌ನಿಂದ 101 ಭಾರತೀಯ ಕೈದಿಗಳ ಬಿಡುಗಡೆ
ಅಣ್ವಸ್ತ್ರ ಪ್ರಯೋಗಿಸುವುದಿಲ್ಲ: ಜರ್ದಾರಿ ಹೇಳಿಕೆಗೆ ಪಾಕ್ ಅಸಮಾಧಾನ