ಎಲ್‌ಟಿಟಿಇ ಭದ್ರಕೋಟೆಯಾದ ಕಿಲಿನೊಚ್ಚಿ ಪ್ರದೇಶವನ್ನು ಸ್ವಾಧೀನ ಪಡಿಸಲು ಲಂಕಾ ಸೈನ್ಯ ನಡೆಸಿದ ಕಾರ್ಯಾಚರಣೆಯಲ್ಲಿ 27 ಲಂಕಾ ಸೈನಿಕರು ಹಾಗೂ 120 ಎಲ್‌ಟಿಟಿಇ ಬಂಡುಕೋರರು ಹತರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಕಾ ಸೈನ್ಯವು ಕಿಲಿನೊಚ್ಚಿಯ ಹೊರವಲಯದಲ್ಲಿ ಇತ್ತಂಡಗಳ ನಡುವೆ ಘರ್ಷಣೆ ನಡೆಯಿತು. ಆದರೆ ಎಲ್‌ಟಿಟಿಇ ಬಂಡುಕೋರರ ಪ್ರಮುಖ ಕೇಂದ್ರವಾದ ಈ ಪ್ರದೇಶದಲ್ಲಿ ಲಂಕಾ ಸೈನ್ಯಕ್ಕೆ ಪ್ರಬಲ ಪ್ರತಿರೋಧವನ್ನು ಎದುರಿಸಿತ್ತು.
ಘರ್ಷಣೆಯಲ್ಲಿ 27 ಸೈನಿಕರು ತಾಯ್ನಾಡಿನ ರಕ್ಷಣೆಗೋಸ್ಕರ ಜೀವ ತ್ಯಾಗ ಮೂಡಿದ್ದು, ಇತರ 70 ಮಂದಿ ಸೈನಿಕರು ಗಾಯಾಗೊಂಡಿದ್ದಾರೆಂದು ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿವೆ.
ಎಲ್‌ಟಿಟಿಇ ಬಂಡುಕೋರರ ಕೊನೆಯ ಭದ್ರಕೋಟೆಯಾದ ಕಿಲಿನೊಚ್ಚಿ ಪ್ರದೇಶದಲ್ಲಿ ಕಳೆದ 36 ಗಂಟೆಗಳಿಂದ ನಡೆದಘರ್ಷಣೆಯಲ್ಲಿ 120 ತಮಿಳು ಬಂಡುಕೋರರು ಹತರಾಗಿದ್ದು, 80 ಮಂದಿ ಗಾಯಾಗೊಂಡಿದ್ದಾರೆ.
ಕಿಲಿನೊಚ್ಚಿ ಪ್ರದೇಶದಲ್ಲಿ ಘರ್ಷಣೆ ಮುಂದುವರಿಯುತ್ತಿದ್ದು. ಲಂಕಾ ಸೈನ್ಯವು ನಿಧಾನವಾಗಿ ಬಾಕಿ ಉಳಿದಿರುವ ಎಲ್‌ಟಿಟಿಇ ಭದ್ರನೆಲೆಗಳನ್ನು ವಶಪಡಿಸಿಕೊಳ್ಳಲು ಮುನ್ನುಗ್ಗುತ್ತಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.
ದಕ್ಷಿಣ ಮತ್ತು ಉತ್ತರ ದಿಕ್ಕಿನಿಂದ ಲಂಕಾ ಸೈನ್ಯದ ಆಕ್ರಮಣ ಮುಂದುವರಿಸುತ್ತಿದ್ದು, ಈ ಪ್ರದೇಶದಲ್ಲಿ ಎರಡು ದೊಡ್ಡ ಪಟ್ಟಣಗಳನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದೆ. |