ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ತಂಡದಲ್ಲಿ ಭಾರತೀಯರದ್ದೇ 'ಕಾರುಬಾರು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ತಂಡದಲ್ಲಿ ಭಾರತೀಯರದ್ದೇ 'ಕಾರುಬಾರು'
ND
ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಹಾಗೂ ಬಿಡೆನ್ ಅವರ ನೂತನ ಆಡಳಿತ ತಂಡದಲ್ಲಿ ಹಲವಾರು ಮಂದಿ ಭಾರತೀಯ ಮೂಲದ ಅಮೆರಿಕನ್‌ರು ನೇಮಕಗೊಂಡಿದ್ದು, ಇದೀಗ ಒಬಾಮ ನೇತೃತ್ವದ ಸರಕಾರದಲ್ಲಿ ಭಾರತೀಯರೇ ರಾರಾಜಿಸತೊಡಗಿದ್ದಾರೆ.

ಇದೀಗ ಆಂತರಿಕ ಸರಕಾರಿ ವ್ಯವಹಾರಗಳ ಸಹಾಯಕ ನಿರ್ದೇಶಕರ ಹುದ್ದೆಗೆ ಭಾರತೀಯ ಮೂಲದ ಟೆಕ್ಸಾಸ್ ನಿವಾಸಿ ಪರಾಗ್ ಮೆಹ್ತಾ ಅವರನ್ನು ಆಯ್ಕೆಗೊಳಿಸಿದ್ದು, ಒಬಾಮ ಅವರ ಆಡಳಿತದಲ್ಲಿ ಏಷ್ಯನ್ ಅಮೆರಿಕನ್, ಪೆಸಿಫಿಕ್ ದ್ವೀಪರಾಷ್ಟ್ರಗಳ ಹಲವು ಮಂದಿ ಸೇರ್ಪಡೆಗೊಂಡಿದ್ದಾರೆ.

ಒಬಾಮ ಅವರು ಪರಾಗ್ ಅವರನ್ನು ಆಯ್ಕೆ ಮಾಡುವುದರೊಂದಿಗೆ ಭಾರತೀಯ ಅಮೆರಿಕನ್ ಸಮುದಾಯವೇ ಹೆಮ್ಮೆ ಪಡುವಂತಾಗಿದೆ. ಅದೇ ರೀತಿ ಆಂತರಿಕ ಸರಕಾರಿ ವ್ಯವಹಾರಗಳ ನಿರ್ದೇಶಕರನ್ನಾಗಿ ಭಾರತೀಯ ಮೂಲದ ನಿಕ್ ರಾಥೋಡ್ ಅವರನ್ನು ಆಯ್ಕೆಮಾಡಲಾಗಿದೆ.

ಒಬಾಮ ಅವರ ಹಾರ್ವಡ್ ಕಾನೂನು ಕಾಲೇಜಿನ ಕ್ಲಾಸ್‌ಮೇಟ್, ಪೇಟೆಂಟ್ ಲಾ ಆಫ್ ಡ್ಯೂಕ್ ಯೂನಿರ್ವಸಿಟಿಯ ಪ್ರೊಫೆಸರ್ ಆರತಿ ರಾಯ್ ಅವರನ್ನು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಕಲೆಗಳ ಪುನರ್‌ಪರಿಶೀಲನಾ ತಂಡದ ಸದಸ್ಯರನ್ನಾಗಿ ನಿಯೋಜಿಸಲಾಗಿದೆ.

ಬ್ಲ್ಯಾಕ್ ಸ್ಟೋನ್ ಸಂಸ್ಥೆಯ ಆಡಳಿತ ನಿರ್ದೇಶಕ ಅಂಜನ್ ಮುಖರ್ಜಿ ಅವರನ್ನು ಆರ್ಥಿಕ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಮಂಡಳಿಯ ಪುನರ್ ಪರಿಶೀಲನಾ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ರಚನಾ ಭೂಮಿಕ್, ಶುಭಾಶ್ರೀ ರಾಮನಾಥನ್, ನತಾಶಾ ಬಿಲಿಮೊರಿಯಾ, ಪುನೀತ್ ತಲ್ವಾರ್ ಅವರನ್ನು ಸ್ಟೇಟ್, ನ್ಯಾಷನಲ್ ಸೆಕ್ಯುರಿಟಿ, ರಕ್ಷಣೆ, ಗುಪ್ತಚರ ಹಾಗೂ ಆರ್ಮ್ಸ್ ಕಂಟ್ರೋಲ್ ಏಜೆನ್ಸಿ ಪರಿಶೀಲನಾ ತಂಡಗಳ ಸದಸ್ಯರನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಒಬಾಮ ಆಡಳಿತದಲ್ಲಿ ಭಾರತೀಯರದ್ದೇ 'ಕಾರುಬಾರು' ಹೆಚ್ಚಾದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರೆಜಿಲ್ : ಪ್ರವಾಹಕ್ಕೆ 59 ಬಲಿ-ಲಕ್ಷಾಂತರ ಜನ ಅತಂತ್ರ
ಶ್ರೀಲಂಕಾ: ಸೇನಾ ಕಾರ್ಯಾಚರಣೆಗೆ 120 ಎಲ್‌ಟಿಟಿಇ ಬಲಿ
ಕೋಸಿ ವಿವಾದ: ಮುಖರ್ಜಿ - ಪ್ರಚಂಡ ಮಾತುಕತೆ
ಅಲ್ ಕೈದಾಕ್ಕೆ ಲಾಡೆನ್ ಪುತ್ರನ ಬೆಂಬಲ: ಟೆಲಿಗ್ರಾಫ್
ನ್ಯೂಜೆರ್ಸಿ: ಭಾರತೀಯನಿಂದ ಪತ್ನಿ ಹತ್ಯೆ
ಅಫ್ಘಾನ್‌ ಸುರಕ್ಷತೆಗೆ ಮೊದಲ ಆದ್ಯತೆ : ಒಬಾಮ