ನಾಗರಿಕ ಪರಮಾಣು ಯೋಜನೆಯ ಅಂಗವಾಗಿ 150 ಬಿಲಿಯನ್ ಡಾಲರ್‌ನ ಬೃಹತ್ ಪಾಲುದಾರಿಕೆಯಿರುವ ಅಮೆರಿಕವು ತನ್ನ ಅತೀ ದೊಡ್ಡ ಪರಮಾಣು ವ್ಯಾಪಾರ ನಿಯೋಗವನ್ನು ಭಾರತಕ್ಕೆ ಕಳುಹಿಸುವುದಾಗಿ ಹೇಳಿದೆ.
ಜಾಕ್ ಫುಲರ್ ನೇತೃತ್ವದ ವಿಶ್ವದಲ್ಲಿ ಪರಮಾಣು ಸ್ಥಾವರ, ಅಣು ಇಂಧನ ಮತ್ತು ಪರಮಾಣು ಸೇವೆ ಒದಗಿಸುವುದರಲ್ಲಿ ಅಗ್ರಮಾನ್ಯವಾದ ಗೇ-ಹಿಟಾಚಿಯ ಸಿಇಒ ಸಹಿತ ಅಣುಶಕ್ತಿ ವಾಣಿಜ್ಯ ಕಾರ್ಯನಿರ್ವಾಹಕ ಸಮಿತಿಯು ಡಿಸೆಂಬರ್ 2ರಿಂದ 9ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಜಾಗತಿಕ ವಾಣಿಜ್ಯ ರಿಯಾಕ್ಟರ್‌ನ ಮುಖಂಡರು ಸೇರಿದಂತೆ ಈ ಪರಮಾಣು ವಹಿವಾಟು ಯೋಜನೆಯಲ್ಲಿನ ನಿಯೋಗದಲ್ಲಿ ವಾಷಿಂಗ್ಟನ್ ಇಲೆಕ್ಟ್ರಿಕ್ ಕಂಪೆನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದಾರೆ.
ವಿಶ್ವದಲ್ಲಿನ 30ಕ್ಕಿಂತ ಹೆಚ್ಚು ಅಗ್ರಮಾನ್ಯ ವಾಣಿಜ್ಯ ಪರಮಾಣು ಕಂಪನಿಗಳನ್ನು ಪ್ರತಿನಿಧಿಕರಿಸಿರುವ ಅಮೆರಿಕ ವಾಣಿಜ್ಯ ಮಂಡಳಿಯ 50ಕ್ಕಿಂತ ಹೆಚ್ಚು ಉನ್ನತ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರತಿನಿಧಿಕರಿಸಲಿದ್ದಾರೆ. ಅಮೆರಿಕ-ಇಂಡಿಯಾ ವಾಣಿಜ್ಯ ,ಮಂಡಳಿ(ಯುಎಸ್‍ಐವಿಸಿ) ಮತ್ತು ಅಣುಶಕ್ತಿ ಸಂಸ್ಥೆ(ಎನ್‌ಇಐ)ಯಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಯುಎಸ್‍ಐವಿಸಿ-ಎನ್‌ಇಐ ಪ್ರತಿನಿಧಿಗಳ ತಂಡವು ಭಾರತ ಸರಕಾರದ ಉನ್ನತ ಅಧಿಕಾರಿಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನಾಯಕರು ಮತ್ತು ಭಾರತದ ಕಂಪೆನಿಗಳ ಉನ್ನತ ಸದಸ್ಯರನ್ನು ಭೇಟಿಯಾಗಲಿದ್ದು, ತದನಂತರ ನಿಯೋಗವು ಮುಂಬಯಿ ಹಾಗೂ ಹೈದರಾಬಾದ್‌ಗೆ ಭೇಟಿ ನೀಡಲಿದೆ.
|