ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫಾಸ್ಟರ್ ಪ್ರಕರಣ: ಭಾರತೀಯ ಕೋಹ್ಲಿಗೆ 24ವರ್ಷ ಸಜೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾಸ್ಟರ್ ಪ್ರಕರಣ: ಭಾರತೀಯ ಕೋಹ್ಲಿಗೆ 24ವರ್ಷ ಸಜೆ
ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಹನ್ನಾ ಫಾಸ್ಟರ್ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತೀರ್ಪು ಮಂಗಳವಾರ ಸಂಜೆ ಹೊರಬಿದ್ದಿದ್ದು, ಭಾರತೀಯ ಮೂಲದ ಮಣಿಂದರ್ ಪಾಲ್ ಸಿಂಗ್ ಕೋಹ್ಲಿ ದೋಷಿ ಎಂದು ಸಾಬೀತಾಗುವ ಮೂಲಕ 24ವರ್ಷಗಳ ಕಠಿಣ ಸಜೆ ವಿಧಿಸಿದೆ.

ಸುಮಾರು ಐದು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಮಿಂಚೆಸ್ಟರ್ ಕ್ರೌನ್ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಕೋಹ್ಲಿಗೆ 24ವರ್ಷಗಳ ಸೆರೆಮನೆವಾಸ ಶಿಕ್ಷೆ ವಿಧಿಸುವ ಮೂಲಕ ಕೊನೆಗೂ ಫಾಸ್ಟರ್ ಪೋಷಕರಿಗೆ ನ್ಯಾಯ ದೊರಕಿದಂತಾಗಿದೆ.

2003ರಲ್ಲಿ ಬ್ರಿಟನ್‌ನ ಸೌತ್‌ಹ್ಯಾಂಪ್ಟನ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ 17ರ ಹರೆಯದ ಹನ್ನಾಳನ್ನು ಮಣಿಂದರ್ ಅಪಹರಿಸಿ, ವ್ಯಾನಿನ ಹಿಂಬದಿಯಲ್ಲಿ ಅತ್ಯಾಚಾರಗೈದು ಕೊಲೆ ಮಾಡಿದ್ದ. ನಂತರ ಶವವನ್ನು ಮೋರಿಗೆ ಎಸೆದು ಭಾರತಕ್ಕೆ ಓಡಿಬಂದು ಡಾರ್ಜಿಲಿಂಗ್‌ನಲ್ಲಿ ತಲೆಮರೆಸಿಕೊಂಡಿದ್ದ.

ಈ ಘಟನೆ ಬ್ರಿಟನ್ ಹಾಗೂ ಭಾರತೀಯ ಮಾಧ್ಯಮಗಳಲ್ಲಿ ಭಾರೀ ಚರ್ಚಗೆ ಗ್ರಾಸವಾಗಿತ್ತು. ಹನ್ನಾಳ ತಂದೆ ಮತ್ತು ತಾಯಿ ಭಾರತಕ್ಕೆ ಮೂರು ಬಾರಿ ಆಗಮಿಸಿ ತಮ್ಮ ಗೋಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

41ರ ಹರೆಯದ ಮಣಿಂದರ್ ಅತ್ಯಾಚಾರಗೈದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥ ಎಂದು ಘೋಷಿಸಿದ್ದು, ಮಿಂಚೆಸ್ಟರ್ ಕ್ರೌನ್ ನ್ಯಾಯಾಲಯ ಮಂಗಳವಾರ 24ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರವೇ ಅಮೆರಿಕ ವಾಣಿಜ್ಯ ತಂಡ ಭಾರತಕ್ಕೆ ಭೇಟಿ
ಬ್ಯಾಂಕಾಕ್ ಘರ್ಷಣೆ: ವಿಮಾನ ಸಂಚಾರ ರದ್ದು
ನ್ಯೂಜೆರ್ಸಿ: ಪತ್ನಿ ಹಂತಕ ಭಾರತೀಯನ ಬಂಧನ
ಒಬಾಮ ತಂಡದಲ್ಲಿ ಭಾರತೀಯರದ್ದೇ 'ಕಾರುಬಾರು'
ಬ್ರೆಜಿಲ್ : ಪ್ರವಾಹಕ್ಕೆ 59 ಬಲಿ-ಲಕ್ಷಾಂತರ ಜನ ಅತಂತ್ರ
ಶ್ರೀಲಂಕಾ: ಸೇನಾ ಕಾರ್ಯಾಚರಣೆಗೆ 120 ಎಲ್‌ಟಿಟಿಇ ಬಲಿ