ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಶ್ವ ಸಂಸ್ಥೆಯಿಂದ ಕಾಂಗೋ ಹಿಂಸಾಚಾರದ ತನಿಖೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವ ಸಂಸ್ಥೆಯಿಂದ ಕಾಂಗೋ ಹಿಂಸಾಚಾರದ ತನಿಖೆ
ಡೆಮಾಕ್ರಟಿಕ್ ರಿಪ್ಲಬಿಕ್ ಆಫ್ ಕಾಂಗೋದಲ್ಲಿ ನಡೆದ ಹಿಂಸಾಚಾರಕ್ಕೆ ಹಲವಾರು ಮಂದಿ ಬಲಿಯಾಗಿದ್ದು, ಇದರ ಕುರಿತು ತನಿಖೆ ನಡೆಸಲು ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯು ತುರ್ತಾಗಿ ಸಭೆಯೊಂದನ್ನು ಕರೆಯಲಾಗಿದೆಯೆಂದು ವಿಶ್ವ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಯುರೋಪ್ ಒಕ್ಕೂಟದ ಸಲುವಾಗಿ ಫ್ರಾನ್ಸ್‌ನ ಬೇಡಿಕೆಯನ್ನು ಪರಿಗಣಿಸಿ ಜಿನೆವಾದಲ್ಲಿ ಶುಕ್ರವಾರ ಒಂದು ದಿನದ ವಿಶೇಷ ಸಮಾವೇಶವನ್ನು ಕರೆಯಲಾಗಿದೆಯೆಂದು ಅವರು ಹೇಳಿದರು.

ಕಾಂಗೋ ಕಾನೂನು ಬಾಹಿರವಾಗಿ ಶಿಕ್ಷೆ ಜ್ಯಾರಿ ಗೊಳಿಸುವಿಕೆ, ಅತ್ಯಾಚಾರ, ಕ್ರೂರವಾದ ಹಿಂಸೆಗೆ ಎಡೆಮಾಡುವುದು, ಅಮಾನವೀಯ ರೀತಿಯಲ್ಲಿ ವರ್ತಿಸುವುದು ಇವುಗಳೆಲ್ಲ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದ್ದು, ಕಾಂಗೋದ ಸೈನ್ಯ ಮತ್ತು ಪೊಲೀಸರು ಇದಕ್ಕೆ ಹೊಣೆಗಾರರಾಗಿದ್ದಾರೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮ‌ೂನ್ ತಿಳಿಸಿದ್ದಾರೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯು 1994ರೌಂಡಾ ಜನಾಂಗೀಯ ಹತ್ಯೆಯ ಅಪರಾಧವೆಸಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಆರೋಪಿಗಳಾಗಿ ರೆನೆಗಡೆ ಕಾಂಗೋಲೀಸ್ ಟಸ್ಟಿ ಜನರಲ್ ಲೊರೆಂಟ್ ನುಕುಡ(ಸಿಎನ್‌ಡಿಪಿ) ಮತ್ತು ಇತರ ಕ್ರಾಂತಿಕಾರಿ ಸಂಘಟನೆಗಳು ಮತ್ತು ರೌಂಡಾ ಸಹಾಯಕ ಸೇನೆಯ ಮೇಲೆ ಆರೋಪವನ್ನು ಹೊರಿಸಲಾಗಿದೆಯಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಪಾಕ್ ನಿರ್ಧಾರ
ಬೆನಜೀರ್‌ಗೆ ಮರಣೋತ್ತರ ಮಾನವ ಹಕ್ಕು ಪ್ರಶಸ್ತಿ
ಫಾಸ್ಟರ್ ಪ್ರಕರಣ: ಭಾರತೀಯ ಕೋಹ್ಲಿಗೆ 24ವರ್ಷ ಸಜೆ
ಶೀಘ್ರವೇ ಅಮೆರಿಕ ವಾಣಿಜ್ಯ ತಂಡ ಭಾರತಕ್ಕೆ ಭೇಟಿ
ಬ್ಯಾಂಕಾಕ್ ಘರ್ಷಣೆ: ವಿಮಾನ ಸಂಚಾರ ರದ್ದು
ನ್ಯೂಜೆರ್ಸಿ: ಪತ್ನಿ ಹಂತಕ ಭಾರತೀಯನ ಬಂಧನ