ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ರಜೆಗಳ ವಾಪಸಾತಿಗೆ ಮುಂಬೈಗೆ ವಿಮಾನ: ಯುರೋಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಜೆಗಳ ವಾಪಸಾತಿಗೆ ಮುಂಬೈಗೆ ವಿಮಾನ: ಯುರೋಪ್
ಮುಂಬೈಯಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಿಂದಾಗಿ ಹಲವಾರು ಮಂದಿ ವಿದೇಶಿ ಪ್ರವಾಸಿಗರು ಕಂಗಾಲಾಗುವಂತಾಗಿದ್ದು, ಇದೀಗ ದೇಶದ ನಾಗರಿಕರನ್ನು ಸುರಕ್ಷಿತವಾಗಿ ಕರೆಯಿಸಿಕೊಳ್ಳುವ ನಿಟ್ಟಿನಲ್ಲಿ ಯುರೋಪ್ ಭಾರತಕ್ಕೆ ವಿಮಾನವನ್ನು ಕಳುಹಿಸುವ ಯೋಜನೆಯಲ್ಲಿರುವುದಾಗಿ ತಿಳಿಸಿದೆ.

ಬುಧವಾರ ರಾತ್ರಿ ಉಗ್ರರು ನಡೆಸಿದ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟಕ್ಕೆ ನೂರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಒಬೆರಾಯ್ ಮತ್ತು ತಾಜ್ ಹೊಟೇಲುಗಳಲ್ಲಿ ಹಲವು ವಿದೇಶಿ ಪ್ರವಾಸಿಗರು ಉಗ್ರರ ಒತ್ತೆಯಾಳುಗಳಾಗಿದ್ದಾರೆ.

ಇದೀಗ ಎರಡು ಸಾಧ್ಯತೆಗಳಿದ್ದು, ಒಂದನೆಯದಾಗಿ ಸ್ಪ್ಯಾನಿಶ್ ಸರಕಾರ ವಿಮಾನವೊಂದನ್ನು ಕಳುಹಿಸುವ ಸಾಧ್ಯತೆ ಇದೆ, ಮತ್ತು ಎಲ್ಲಾ ಯುರೋಪಿಯನ್ ಪ್ರಜೆಗಳು ವಾಪಸಾಗುವ ನಿಟ್ಟಿನಲ್ಲಿ ಯುರೋಪ್ ಜೆಟ್ ವಿಮಾನವನ್ನು ಕಳುಹಿಸಲಿದೆ ಎಂದು ಸಿಸರ್ ಅಲ್ಬಾ ಅವರು ಸ್ಪ್ಯಾನಿಶ್ ನ್ಯಾಷನಲ್ ರೇಡಿಯೋಕ್ಕೆ ತಿಳಿಸಿದ್ದಾರೆ.

ಈಗಾಗಲೇ 20ಮಂದಿ ಪ್ರಜೆಗಳನ್ನು ಸ್ಪ್ಯಾನಿಶ್ ಕಾನ್ಸುಲೇಟ್‌ಗೆ ಕರೆತರಲಾಗಿದ್ದು, ಮುಂಬೈ ಘಟನೆಯಲ್ಲಿ ಇಬ್ಬರು ಸ್ಪ್ಯಾನಿಶ್‌ ಪ್ರಜೆಗಳಿಗೆ ಗಾಯವಾಗಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ.

ಮ್ಯಾಡ್ರಿಡ್ ಸರಕಾರದ ಎಸ್ಪೆರಾಂಜಾ ಅಗ್ಯುರ್ರೆ ಅವರು ಮುಂಬೈ ಹೋಟೆಲ್‌ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಸರಕಾರದ ವಕ್ತಾರ ತಿಳಿಸಿದ್ದು, ಆಕೆ ಗುರುವಾರ ಬೆಳಿಗ್ಗೆ ಮ್ಯಾಡ್ರಿಡ್‌ಗೆ ವಾಪಸು ಆಗಮಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಥಾಯ್: ಪ್ರಧಾನಿ ಪಟ್ಟ ತ್ಯಜಿಸಲು ಸೇನೆ ಆಗ್ರಹ
ಮುಂಬೈ ದಾಳಿಗೆ ಒಬಾಮ ತೀವ್ರ ಖಂಡನೆ
ವಿಶ್ವ ಸಂಸ್ಥೆಯಿಂದ ಕಾಂಗೋ ಹಿಂಸಾಚಾರದ ತನಿಖೆ
ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಪಾಕ್ ನಿರ್ಧಾರ
ಬೆನಜೀರ್‌ಗೆ ಮರಣೋತ್ತರ ಮಾನವ ಹಕ್ಕು ಪ್ರಶಸ್ತಿ
ಫಾಸ್ಟರ್ ಪ್ರಕರಣ: ಭಾರತೀಯ ಕೋಹ್ಲಿಗೆ 24ವರ್ಷ ಸಜೆ