ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶಾಂಘೈ ಪೊಲೀಸ್ ಹಂತಕನಿಗೆ ಗಲ್ಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಂಘೈ ಪೊಲೀಸ್ ಹಂತಕನಿಗೆ ಗಲ್ಲು
ತಪ್ಪು ನಿರ್ಧಾರದಿಂದಾಗಿ ತನ್ನನ್ನು ಸೆರೆ ಹಿಡಿದ ಪ್ರತಿಕಾರಕ್ಕಾಗಿ ಆರು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಆರೋಪಿಯೊಬ್ಬನಿಗೆ ಚೀನಾ ಬುಧವಾರ ಮರಣದಂಡನೆಗೆ ಗುರಿಪಡಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಚೀನಾದ ಸುಪ್ರೀಂ ಪೀಪಲ್ಸ್ ಕೋರ್ಟ್ ಮರಣದಂಡನೆಗೆ ಅನಮೋದನೆ ನೀಡಿದ ಬಳಿಕ, ಶಾಂಘೈನ ಯಾಂಗ್ ಜಿಯಾ(28) ಎಂಬಾತನನ್ನು ನೇಣಿಗೆ ಏರಿಸಲಾಯಿತು ಎಂದು ಕ್ಸಿಯಾನ್‌‌ಗಹುವಾ ಸುದ್ದಿ ಸಂಸ್ಥೆಯ ವರದಿ ಹೇಳಿದೆ.

ತನ್ನನ್ನು ವಿನಾಕಾರಣ ಬಂಧಿಸ ಅವಮಾನಿಸಲಾಗಿತ್ತು ಎಂದು ಪ್ರತಿಕಾರ ತೀರಿಸಲು ಶಾಂಘೈನ ಪೊಲೀಸ್ ಠಾಣೆಗೆ ತೆರಳಿದ್ದ ಜಿಯಾ ಆರು ಮಂದಿ ಪೊಲೀರನ್ನು ಹತ್ಯೆಗೈದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೆಪ್ಟೆಂಬರ್ ತಿಂಗಳಿನಲ್ಲಿ ದೋಷಿ ಎಂದು ತೀರ್ಪು ನೀಡಿ, ಮರಣದಂಡನೆ ವಿಧಿಸಿತ್ತು.

ಮರಣದಂಡನೆ ವಿರುದ್ದ ಕಳೆದ ತಿಂಗಳು ಸಲ್ಲಿಸಿದ್ದ ಮೇಲ್ಮನವಿ ಕೂಡ ಸುಪ್ರೀಂ ಪೀಪಲ್ಸ್ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈಗೆ ಪ್ರಯಾಣಿಸದಂತೆ ಕೆನಡಾ,ಬ್ರಿಟನ್ ಮನವಿ
ಪ್ರಜೆಗಳ ವಾಪಸಾತಿಗೆ ಮುಂಬೈಗೆ ವಿಮಾನ: ಯುರೋಪ್
ಥಾಯ್: ಪ್ರಧಾನಿ ಪಟ್ಟ ತ್ಯಜಿಸಲು ಸೇನೆ ಆಗ್ರಹ
ಮುಂಬೈ ದಾಳಿಗೆ ಒಬಾಮ ತೀವ್ರ ಖಂಡನೆ
ವಿಶ್ವ ಸಂಸ್ಥೆಯಿಂದ ಕಾಂಗೋ ಹಿಂಸಾಚಾರದ ತನಿಖೆ
ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಪಾಕ್ ನಿರ್ಧಾರ