ವಿಶ್ವವಿದ್ಯಾಲಯದ ಆವರಣದಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸದಂತೆ ನಿಷೇಧ ಹೇರಲು ನೆದರ್‌ಲ್ಯಾಂಡ್ ಸರಕಾರ ಯೋಜನೆ ರೂಪಿಸುತ್ತಿದೆ. ವಿದ್ಯಾರ್ಥಿಗಳಲ್ಲದೇ ಆವರಣ ಪ್ರವೇಶಿಸುವ ಎಲ್ಲ ಮಹಿಳೆಯರಿಗೂ ಈ ನಿಯಮ ಅನ್ವಯವಾಗಲಿದೆ.
ಈ ಕುರಿತು ಶಿಕ್ಷಣ ಸಚಿವ ರೋನಾಲ್ಡ್ ಪ್ಲಾಸ್ಟರ್ಕ್ ಸಂಸತ್‌ಗೆ ತಿಳಿಸಿದ್ದಾರೆ. ಮೊದಲು ಈ ನಿಯಮವನ್ನು ಸರಕಾರಿ ಶಾಲೆಗಳಲ್ಲಿ ಜಾರಿಗೆ ತರಲು ಸಿದ್ದತೆ ನಡೆಸಲಾಗಿತ್ತು.
ಆದರೆ, ಈಗ ಶಿಕ್ಷಣ ಸಂಸ್ಥೆಗಳಲ್ಲೂ ಜಾರಿಗೆ ತರಲು ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಈ ನಿಯಮ ವಿದ್ಯಾರ್ಥಿಗಳು, ಶಿಕ್ಷಕರು ಸ್ವಚ್ಚತಾ ಕಾರ್ಮಿಕರು ಹಾಗೂ ಸಂಸ್ಥೆಯ ಆವರಣ ಪ್ರವೇಶಿಸುವ ಪಾಲಕರಿಗೆ ಅನ್ವಯವಾಗಲಿದೆ. ಬುರ್ಖಾ ನಿಷೇಧದಿಂದ ಒಬ್ಬರು ಮತ್ತೊಬ್ಬರೊಂದಿಗೆ ಸಂಭಾಷಣೆ ನಡೆಸುವಾಗ ಮುಖ ನೋಡಿಕೊಳ್ಳಬಹುದು ಎಂದು ಹೇಳಿದರು. |