ಮುಂಬೈಯಲ್ಲಿ ಭಯೋತ್ಪಾದನಾ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಎಫ್‌ಬಿಐ ತನಿಖಾದಳ ಮತ್ತು ವಿಧಿವಿಜ್ಞಾನ ತಂತ್ರಜ್ಞರ ತಂಡವನ್ನು ಭಾರತಕ್ಕೆ ಕಳುಹಿಸುವುದಾಗಿ ಹೇಳಿದೆ.
ಎಫ್‌ಬಿಐ ತಂಡವು ಭಾರತದ ಗುಪ್ತಚರ ದಳ ಮತ್ತು ಭದ್ರತಾ ಸಂಸ್ಥೆಗಳ ಜತೆ ದಾಳಿಗಳ ಬಗ್ಗೆ ಯೋಜನೆ ಮತ್ತು ಸಾಕ್ಷ್ಯಾಧಾರ ಸಂಗ್ರಹದ ಬಗ್ಗೆ ವಿಚಾರ ವಿನಿಮಯ ನಡೆಸುವುದಾಗಿ ತಿಳಿಸಿದೆ.
ಈ ದಾಳಿಯ ಹಿಂದೆ ಇರುವ ಭಯೋತ್ಪಾದಕರ ಬಗ್ಗೆ ತಿಳಿಯಲು ಎಫ್‌ಬಿಐ ಆಗಮಿಸುತ್ತಿರುವುದಾಗಿ ಹೇಳಿದೆ. ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುವ ಅಲ್ ಕೈದಾ ತಂತ್ರವನ್ನು ಈ ದಾಳಿಯಲ್ಲಿ ಅನುಸರಿಸಲಾಗಿದೆ ಎಂದು ಅಮೆರಿಕ ಶಂಕಿಸಿದೆ. |