ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದಿರುವ ದಾಳಿಯ ಹಿಂದೆ ಒಸಾಮಾ ಬಿನ್ ಲಾಡೆನ್‌ನ ಅಲ್ ಕೈದಾ ಕೈವಾಡ ಇರುವುದಾಗಿ ಜಗತ್ತಿನ ಪ್ರಮುಖ ಗುಪ್ತಚರ ಇಲಾಖೆ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಉಗ್ರಗಾಮಿಗಳು ಅಲ್ ಕೈದಾ ಸಿದ್ದಪಡಿಸಿದ ನೀಲನಕ್ಷೆ ಅನುಸರಿಸಿ ಸಮುದ್ರ ಮಾರ್ಗದಿಂದ ಮುಂಬೈಗೆ ಬಂದಿದ್ದಾರೆ. ಸಾಧ್ಯವಾದಷ್ಟೂ ಅರಾಜಕತೆ ಸೃಷ್ಟಿಸುವುದು ಅವರ ಉದ್ದೇಶ ಮತ್ತು ಭಾರತದಲ್ಲಿ ಈಗ ಆಗಿರುವುದು ಅದೇ ಎಂದು ಲಂಡನ್ ಮೂಲದ ಭಯೋತ್ಪಾದನೆ ನಿಗ್ರಹ ತಜ್ಞ ಜಾರ್ಜ್ ಕಸಿಮೆರಿಸ್ ಹೇಳಿದ್ದಾರೆ.
ಅಲ್ ಕೈದಾ ಭಯೋತ್ಪಾದಕ ಕಾರ್ಯಾಚರಣೆಗಲ ನೀಲ ನಕ್ಷೆ ತಯಾರಿಸಿದ್ದು, ಜಗತ್ತಿನ ವಿಭಿನ್ನ ಜನ, ಸಮಾಜಘಾತುಕ ಶಕ್ತಿಗಳು ಅದನ್ನು ಅನುಸರಿಸುತ್ತಿವೆ ಎಂದು ವಾಲ್ವೆರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕರೂ ಆಗಿರುವ ಕಸಿಮೆರಿಸ್ ಆತಂಕ ವ್ಯಕ್ತಪಡಿಸಿದ್ದಾರೆ. |