ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ: ಒಮಾಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ: ಒಮಾಮ
ಮುಂಬೈಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿರುವವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಮಾಮ ಅವರು, ಭಯೋತ್ಪಾದಕರು ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈಯಲ್ಲಿನ ಉಗ್ರರ ದಾಳಿಯಲ್ಲಿ ಅಮೆರಿಕದ ಪ್ರಜೆಗಳೂ ಸಾವನ್ನಪ್ಪಿದ್ದೂ ಅವರ ಕುಟುಂಬ ವರ್ಗಕ್ಕೂ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವುದಾಗಿ ಹೇಳಿದ ಅವರು, ವರ್ಜಿನಿಯಾದ ಪ್ರಜೆ, ಅವರ ಮಗಳು, ನ್ಯೂಯಾರ್ಕನ ಪ್ರಜೆಯೊಬ್ಬರು ಬಲಿಯಾಗಿದ್ದು ಅವರೆಲ್ಲರಿಗೂ ಸಂತಾಪ ಸೂಚಿಸಿದ್ದಾರೆ.

ಸಮಾಜಘಾತುಕ ಶಕ್ತಿಯಾಗಿರುವ ಭಯೋತ್ಪಾದಕರು ಮುಗ್ಧ ಜನರನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿರುವ ದಾಳಿ ಹೇಯ ಕೃತ್ಯ ಎಂದು ಹೇಳಿರುವ ಒಬಾಮ, ಭಾರತದಂತಹ ಬೃಹತ್ ಪ್ರಜಾಪ್ರಭುತ್ವವನ್ನು ಅಲುಗಾಡಿಸಲು ಅವರಿಂದ ಸಾಧ್ಯವಿಲ್ಲ. ಅಲ್ಲದೇ ಭಯೋತ್ಪಾದನೆಯನ್ನು ಬುಡಸಮೇತ ಮಟ್ಟಹಾಕುವಲ್ಲಿ ಭಾರತದೊಂದಿಗೆ ಅಮೆರಿಕ ಕೈಜೋಡಿಸುವುದಾಗಿ ತಿಳಿಸಿದರು.

ಭಯೋತ್ಪಾದಕರ ತರ್ಕರಹಿತ ತತ್ವಗಳನ್ನು ನಾಶ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಾಗಿ ಮುಂಬೈಯಲ್ಲಿನ ಸ್ಥಿತಿಗತಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವುದಾಗಿ ಒಮಾಮ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೊಮಾಲಿ ಕಡಲ್ಗಳ್ಳರಿಂದ ಮತ್ತೆ ಕಾರ್ಗೊ ಹಡಗು ಅಪಹರಣ
ಭಾರತಕ್ಕೆ ಐಎಸ್‌ಐ ವರಿಷ್ಠರನ್ನು ಕಳುಹಿಸುವುದಿಲ್ಲ: ಪಾಕ್
ಮುಂಬೈ ದಾಳಿಯ ಹಿಂದೆ ಅಲ್ ಕೈದಾ: ಲಂಡನ್
ಭಾರತಕ್ಕೆ ಅಮೆರಿಕದ ಎಫ್‌ಬಿಐ ತಂಡ
ಸ್ಫೋಟ : ಭಾರತ ಜತೆ ಸಹಕಾರಕ್ಕೆ ಯುಎನ್‌ಎಸ್‌ಸಿ ಮನವಿ
ಬ್ಯಾಂಕಾಕ್: ತುರ್ತು ಪರಿಸ್ಥಿತಿ ಹೇರಿಕೆ