ಸುಮಾರು 59 ಗಂಟೆಗಳ ಕಾಲ ಉಗ್ರರ ವಿರುದ್ಧ ಶನಿವಾರ ಬೆಳಿಗ್ಗೆ ಎನ್ಎಸ್‌ಜಿ ಕಮಾಂಡೋಗಳು ನಡೆಸಿದ ಕಾರ್ಯಾಚರಣೆ ಯಶಸ್ವಿಯಾದ ಕೆಲವೇ ಹೊತ್ತಿನಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಮಾಮ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಮುಂಬೈ ಭಯೋತ್ಪದನಾ ದಾಳಿಯಲ್ಲಿ ಅಮಾಯಕ ಪ್ರಜೆಗಳು ಬಲಿಯಾಗಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಅಮೆರಿಕದ ಬೆಂಬಲ ಇರುವುದಾಗಿಯೂ ಭರವಸೆ ನೀಡಿರುವುದಾಗಿ ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ವಾಣಿಜ್ಯ ನಗರಿಯಲ್ಲಿ ಕಳೆದ ಮೂರು ದಿನಗಳಿಂದ ಉಗ್ರರು ನಡೆಸಿದ ದಾಳಿಗೆ 195ಮಂದಿ ಸಾವನ್ನಪ್ಪಿದ್ದು, ಅಂದಾಜು 327 ಜನರು ಗಾಯಗೊಂಡಿದ್ದರು.
ಈ ಘಟನೆಯಲ್ಲಿ ಐದು ಮಂದಿ ಅಮೆರಿಕದ ಪ್ರಜೆಗಳೂ ಸಾವನ್ನಪ್ಪಿದ್ದರು. ದಾಳಿಯಲ್ಲಿ ಸಾವನ್ನಪ್ಪಿದವರ ಬಗ್ಗೆ ಅಮೆರಿಕದ ಹಾಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ಸಂತಾಪ ವ್ಯಕ್ತಪಡಿಸಿದ್ದು, ಮೂಲಭೂತವಾದಿಗಳ ವಿರುದ್ಧದ ಹೋರಾಟಕ್ಕೆ ತಮ್ಮ ಬೆಂಬಲವನ್ನು ಮುಂದುವರಿಸುವುದಾಗಿ ಅವರು ಶುಕ್ರವಾರ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದರು. |