ಮುಂಬೈಯ ಯಹೂದಿ ಕೇಂದ್ರದಲ್ಲಿ ಉಗ್ರರ ದಾಳಿಯ ವೇಳೆ ಸಾವನ್ನಪ್ಪಿದ ತನ್ನ ದೇಶವಾಸಿಗಳ ಮರಣಕ್ಕೆ ಇಸ್ರೇಲ್ ಕಂಬನಿ ಮಿಡಿದಿದೆ.
ಇಸ್ರೇಲ್‌ನ ವಿದೇಶಾಂಗ ಸಚಿವಾಲಯವು ಉಗ್ರರ ದಾಳಿಯಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿರುವುದಾಗಿ ಹೇಳಿದೆ. ಸತ್ತವರೆಲ್ಲರೂ ಯಹೂದಿಯರು ಮತ್ತು ಅವರಲ್ಲಿ ಕನಿಷ್ಠ ಏಳು ಮಂದಿ ಇಸ್ರೇಲಿ ಪ್ರಜೆಗಳು ಎಂದು ಸಚಿವಾಲಯದ ವಕ್ತಾರ ಯಿಗಾಲ್ ಪಲ್ಮೋರ್ ಅವರು ಶನಿವಾರ ತಿಳಿಸಿದ್ದಾರೆ.
ಎನ್ಎಸ್‌ಜಿ ಕಮಾಂಡೋಗಳು ಇವರನ್ನು ರಕ್ಷಿಸಲು ಭಾರೀ ಪ್ರಯತ್ನ ಮಾಡಿದ್ದಾರಾದರೂ ಅವರ ಪ್ರಯತ್ನ ಫಲ ನೀಡಲಿಲ್ಲ.
ಸತ್ತವರಲ್ಲಿ ಯಹೂದಿ ಕೇಂದ್ರವನ್ನು ನಡೆಸುತ್ತಿದ್ದ ರಬ್ಬಿ ಮತ್ತು ಅವರ ಪತ್ನಿಯೂ ಸೇರಿದ್ದಾರೆ. |