ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಗತ್ತಿನ 20 ದೇಶಗಳು 'ಅತೀ ಅಪಾಯಕಾರಿ': ಟೆಲಿಗ್ರಾಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಗತ್ತಿನ 20 ದೇಶಗಳು 'ಅತೀ ಅಪಾಯಕಾರಿ': ಟೆಲಿಗ್ರಾಫ್
ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ಮೂರು ದಿನಗಳ ಕಾಲ ಉಗ್ರರು ನಡೆಸಿದ ದಾಳಿಗೆ ತತ್ತರಿಸಿ ಹೋದ ಬೆನ್ನಲ್ಲೇ, ಇದೀಗ ಜಗತ್ತಿನ ಸುಮಾರು 20 ಪ್ರಮುಖ ಸ್ಥಳಗಳು 'ಮೋಸ್ಟ್ ಡೇಂಜರಸ್' ಎಂದು ಬ್ರಿಟನ್ ಮಾಧ್ಯಮವೊಂದರ ವರದಿ ತಿಳಿಸಿದೆ.

ಮುಂಬೈಯಲ್ಲಿ ಉಗ್ರರು ನಡೆಸಿದ ದಾಳಿಗೆ ಸುಮಾರು 200ಜನರು ಬಲಿಯಾಗಿದ್ದು, ಜಗತ್ತಿನಲ್ಲಿ ಸುಮಾರು 20ಸ್ಥಳಗಳು ಅತೀ ಅಪಾಯಕಾರಿಯಾಗಿವೆ ಎಂದು ಬ್ರಿಟನ್‌ನ ದಿ ಡೈಲಿ ಟೆಲಿಗ್ರಾಫ್ ವರದಿ ಹೇಳಿದೆ.

ಭಾರತ ಸೇರಿದಂತೆ, ಪಾಕಿಸ್ತಾನ, ಅಫ್ಘಾನಿಸ್ತಾನ, ಇಸ್ರೇಲ್, ಪ್ಯಾಲೆಸ್ತೇನಿಯನ್ ಪ್ರದೇಶ, ಮೆಕ್ಸಿಕೋ, ಥಾಯ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಚೆಚೆನ್ಯಾ, ಜಮೈಕಾ, ಸುಡಾನ್, ಕೊಲೊಂಬಿಯಾ, ಹೈಟಿ, ಎರೆಟ್ರೆಯಾ, ಡೆಮೊಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಲಿಬೇರಿಯಾ, ನೈಜಿರಿಯಾ, ಜಿಂಬಾಬ್ವೆ ಹಾಗೂ ಲೆಬನಾನ್ ಈ ಪಟ್ಟಿಯಲ್ಲಿ ಸೇರಿವೆ.

ಮುಂಬೈನಲ್ಲಿ ನಡೆದ ಉಗ್ರರು ನಡೆಸಿದ ದಾಳಿ ಸೇರಿದಂತೆ 20 ದೇಶಗಳನ್ನು ಹೊರತುಪಡಿಸಿ, ಜಗತ್ತಿನ ಉಳಿದ ಭಾಗಗಳು ಸುರಕ್ಷಿತ ಎಂದು ವರದಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಅದರಲ್ಲೂ ಕೆಲವು ಸ್ಥಳೀಯ ಪ್ರದೇಶಗಳಾದ ಜಮ್ಮು-ಕಾಶ್ಮಿರ(ಲಡಾಕ್) ಹಾಗೂ ಪಾಕಿಸ್ತಾನದ ಗಡಿಭಾಗಗಳು ಉಗ್ರರ ಕರಿನೆರಳಿನಲ್ಲಿರುವುದಾಗಿ ಹೇಳಿದೆ.

ಪಾಕಿಸ್ತಾನದಲ್ಲಿ ನಿರಂತರವಾಗಿ ಹಿಂಸಾಚಾರ, ಆತ್ಮಹತ್ಯಾ ದಾಳಿಗಳು ನಡೆಯುತ್ತಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಐಶಾರಾಮಿ ಮಾರಿಯಟ್ ಹೋಟೆಲ್‌ಗೆ ಉಗ್ರರು ದಾಳಿ ನಡೆಸಿದ ಪರಿಣಾಮ 50ಕ್ಕೂ ಅಧಿಕ ಮಂದಿ ಬಲಿಯಾಗಿರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಉಗ್ರರಿಗೆ ಬಲಿಯಾದವರಿಗೆ ಇಸ್ರೇಲಿಗಳ ಕಂಬನಿ
ಮುಂಬೈ ದಾಳಿ: ಪ್ರಧಾನಿಗೆ ಒಮಾಮ ಕರೆ
ಉಗ್ರರ ದಾಳಿ: ಭಾರತ-ಪಾಕ್ ಮಾತುಕತೆಗೆ ಧಕ್ಕೆ
ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ: ಒಮಾಮ
ಸೊಮಾಲಿ ಕಡಲ್ಗಳ್ಳರಿಂದ ಮತ್ತೆ ಕಾರ್ಗೊ ಹಡಗು ಅಪಹರಣ