ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ದಾಳಿ: ವಿಳಂಬ ಕಾರ್ಯಾಚರಣೆಗೆ ಇಸ್ರೇಲ್ ಟೀಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿ: ವಿಳಂಬ ಕಾರ್ಯಾಚರಣೆಗೆ ಇಸ್ರೇಲ್ ಟೀಕೆ
ಮುಂಬೈಯಲ್ಲಿ ಉಗ್ರರು ನಡೆಸಿದ ಸರಣಿ ದಾಳಿಗೆ ಸಂಬಂಧಿಸಿದಂತೆ, ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆ ವಿರುದ್ಧ ಇಸ್ರೇಲ್ ಭಯೋತ್ಪಾದಕ ನಿಗ್ರಹ ತಂಡ ಕಟುವಾಗಿ ಟೀಕಿಸಿದೆ.

ನಾರಿಮನ್ ಭವನದಲ್ಲಿ ಒತ್ತೆಯಾಳುಗಳನ್ನು ರಕ್ಷಿಸಲು ತೆಗೆದುಕೊಂಡ ಭಾರತದ ಭದ್ರತಾ ಪಡೆಗಳ ಕ್ರಮವನ್ನು ಇಸ್ರೇಲ್ ಟೀಕಿಸಿದ್ದು, ಬೇಹುಗಾರಿಕೆ ವ್ಯವಸ್ಥೆ ಸಂಪೂರ್ಣ ವಿಫವಾಗಿತ್ತು ಮತ್ತು ರಕ್ಷಣಾ ಕಾರ್ಯದಲ್ಲಿ ತುಂಬಾ ವಿಳಂಬವಾಗಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಷ್ಟು ದೊಡ್ಡ ಪ್ರಮಾಣದ ವ್ಯವಸ್ಥಿತ ದಾಳಿಯನ್ನು ಇಸ್ರೇಲ್ ಕೂಡ ಅನುಭವಿಸಿಲ್ಲ ಎಂದು ಒಪ್ಪಿಕೊಂಡಿರುವ ಅವರು, ಭಾರತವು ದಾಳಿಯನ್ನು ತಡೆಯುವಲ್ಲಿ ವಿಫಲವಾಗಿದೆ ಹಾಗೂ ನಾರಿಮನ್ ಹೌಸ್‌ನಲ್ಲಿ ಪೂರ್ವ ಸಿದ್ದತೆ ಇಲ್ಲದೆ ರಕ್ಷಣಾ ಕಾರ್ಯದಲ್ಲಿ ತೊಡಗಲಾಯಿತು ಎಂದು ದೂರಿದೆ.

ನಾರಿಮನ್ ಹೌಸ್‌ನಲ್ಲಿನ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ಸುಮಾರು 12ಗಂಟೆಗಳ ಕಾಲ ಕಾಲಾವಕಾಶ ತೆಗೆದುಕೊಂಡಿದ್ದರು, ಇಷ್ಟು ಸಮಯಾವಕಾಶದ ಅಗತ್ಯ ಇತ್ತೇ ಎಂದು ಇಸ್ರೇಲ್ ಭಯೋತ್ಪಾದಕ ನಿಗ್ರಹ ಪಡೆ ತಜ್ಞರು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಗತ್ತಿನ 20 ದೇಶಗಳು 'ಅತೀ ಅಪಾಯಕಾರಿ': ಟೆಲಿಗ್ರಾಫ್
ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಉಗ್ರರಿಗೆ ಬಲಿಯಾದವರಿಗೆ ಇಸ್ರೇಲಿಗಳ ಕಂಬನಿ
ಮುಂಬೈ ದಾಳಿ: ಪ್ರಧಾನಿಗೆ ಒಮಾಮ ಕರೆ
ಉಗ್ರರ ದಾಳಿ: ಭಾರತ-ಪಾಕ್ ಮಾತುಕತೆಗೆ ಧಕ್ಕೆ
ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ: ಒಮಾಮ