ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನ್ಯಾಯಕ್ಕಾಗಿ ಶೋಭರಾಜ್ ವಿಶ್ವಸಂಸ್ಥೆಗೆ ಮೊರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಕ್ಕಾಗಿ ಶೋಭರಾಜ್ ವಿಶ್ವಸಂಸ್ಥೆಗೆ ಮೊರೆ
ನೇಪಾಳದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಕಿನಿ ಕಿಲ್ಲರ್ ಚಾರ್ಲ್ಸ್ ಗುರುಮುಖ್ ಶೋಭರಾಜ್ ಇದೀಗ ತನ್ನ ಬಿಡುಗಡೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮೊರೆ ಹೋಗಿರುವುದಾಗಿ ತಿಳಿಸಿದ್ದಾನೆ.

1975ರಲ್ಲಿ ಅಮೆರಿಕದ ಪ್ರವಾಸಿಯ ಹತ್ಯೆ ಪ್ರಕರಣದಲ್ಲಿ ಚಾರ್ಲ್ಸ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ ತನಗೆ ನೇಪಾಳ ಸರಕಾರ ಅಂತಿಮ ತೀರ್ಪು ನೀಡಲು ಮೀನಮೇಷ ಎಣಿಸುತ್ತಿರುವ ವಿರುದ್ಧ ಆಕ್ರೋಶಿತನಾಗಿರುವ ಚಾರ್ಲ್ಸ್ ನೇಪಾಳ ಸರಕಾರದ ವಿರುದ್ಧವೇ ವಿಶ್ವಸಂಸ್ಥೆಗೆ ದೂರು ದಾಖಲಿಸಿರುವುದಾಗಿ ಹೇಳಿದ್ದಾನೆ.

ನೇಪಾಳ ಸರಕಾರ 1966 ವಿಶ್ವಸಂಸ್ಥೆಯ ಒಪ್ಪಂದದನ್ವಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಧಮನಿಸುತ್ತಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾನೆ.

ವಿಶ್ವಸಂಸ್ಥೆಯ 162ರಾಷ್ಟ್ರಗಳ ಸಮೂಹದಲ್ಲಿ ನೇಪಾಳ ಕೂಡ ಸೇರಿದ್ದು, ಆ ನಿಟ್ಟಿನಲ್ಲಿ ನೇಪಾಳ ವಿಶ್ವಸಂಸ್ಥೆಯ ಒಡಂಬಡಿಕೆಯ ನೀತಿಯನ್ನು ಉಲ್ಲಂಘಿಸಿದ್ದು, ತನಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ಚಾರ್ಲ್ಸ್ ವಕೀಲರು ತಿಳಿಸಿದ್ದಾರೆ.

ಈ ಬಗ್ಗೆ ವಿಶ್ವಸಂಸ್ಥೆ ಸಮಿತಿಗೆ ಕಳೆದ ವಾರ ದೂರು ದಾಖಲಿಸಿರುವುದಾಗಿ ಫ್ರೆಂಚ್ ವಕೀಲೆ ಇಸಾಬೆಲ್ಲೆ ಕೌಟಾಂಟ್ ಪೆರ್ರೆ ಹೇಳಿದ್ದು, ಯಾವುದೇ ಸಾಕ್ಷ್ಯಾಧಾರವಿಲ್ಲದೆ ನೇಪಾಳ ಚಾರ್ಲ್ಸ್‌ನನ್ನು ಬಂಧಿಸಿರುವುದಾಗಿ ಆರೋಪಿಸಿದ್ದಾರೆ.

ಆ ನಿಟ್ಟಿನಲ್ಲಿ ಶೋಭರಾಜ್ ವಿಶ್ವಸಂಸ್ಥೆಗೆ ಸಲ್ಲಿಸಿರುವ ಮೂರನೇಯ ದೂರಿನ ಬಗ್ಗೆ ಯಾವ ತೆರನಾದ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಲ್ಲದೇ ಚಾರ್ಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ನೇಪಾಳ ಅಪೆಕ್ಸ್ ನ್ಯಾಯಾಲಯದಲ್ಲಿ ಡಿ.8ರಂದು ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿ: ವಿಳಂಬ ಕಾರ್ಯಾಚರಣೆಗೆ ಇಸ್ರೇಲ್ ಟೀಕೆ
ಜಗತ್ತಿನ 20 ದೇಶಗಳು 'ಅತೀ ಅಪಾಯಕಾರಿ': ಟೆಲಿಗ್ರಾಫ್
ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಉಗ್ರರಿಗೆ ಬಲಿಯಾದವರಿಗೆ ಇಸ್ರೇಲಿಗಳ ಕಂಬನಿ
ಮುಂಬೈ ದಾಳಿ: ಪ್ರಧಾನಿಗೆ ಒಮಾಮ ಕರೆ
ಉಗ್ರರ ದಾಳಿ: ಭಾರತ-ಪಾಕ್ ಮಾತುಕತೆಗೆ ಧಕ್ಕೆ