ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಡಿ.3 ರಂದು ರೈಸ್ ಭಾರತಕ್ಕೆ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿ.3 ರಂದು ರೈಸ್ ಭಾರತಕ್ಕೆ ಭೇಟಿ
ಮುಂಬೈಯಲ್ಲಿ ಸಂಭವಿಸಿರುವ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತವಾಗುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರು ವಿದೇಶಾಂಗ ಕಾರ್ಯದರ್ಶಿಯಾದ ಕಾಂಡೋಲಿಸಾ ರೈಸ್ ಅವರನ್ನು ಬುಧವಾರ(ಡಿ.3) ಭಾರತಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.

ರೈಸ್ ನಿಗದಿಯಂತೆ ಮಂಗಳವಾರ ಬ್ರೂಸೆ‌ಲ್‌ನಲ್ಲಿ ನಡೆಯುವ ನ್ಯಾಟೋ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಬುಧವಾರ ನವದೆಹಲಿಗೆ ಆಗಮಿಸಲಿದ್ದಾರೆಂದು ಶ್ವೇತ ಭವನ ಮೂಧ್ಯಮ ಕಾರ್ಯದರ್ಶಿ ಡಾನಾ ಪೆರಿನೊ ತಿಳಿಸಿದರು.

ಅಮೆರಿಕದ ಆರು ಪ್ರಜೆಗಳು ಸೇರಿದಂತೆ ಮುಂಬೈ ಸ್ಫೋಟದಲ್ಲಿ 200 ಮಂದಿ ಬಲಿಯಾಗಿದ್ದರ ಹಿನ್ನೆಲೆಯಲ್ಲಿ ಅಧ್ಯಕ್ಷ ಜಾರ್ಜ್ ಬುಷ್ ವಿದೇಶಾಂಗ ಕಾರ್ಯದರ್ಶಿ ರೈಸ್ ಅವರಲ್ಲಿ ಪ್ರಸ್ತುತ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲು ಸೂಚಿಸಿರುವುದಾಗಿ ಅವರು ಹೇಳಿದರು.

ರೈಸ್ ಅವರ ಬುಧವಾರ ನವದೆಹಲಿಯ ಭೇಟಿಯ ಮುನ್ನ ಭಾನುವಾರ ಲಂಡನ್‌ಗೆ ಪ್ರಯಾಣ ಕೈಗೊಂಡಿದ್ದು, ಬ್ರೂಸೆಲ್‌ನಲ್ಲಿ ಮಂಗಳವಾರ ನಡೆಯಲಿರುವ ನ್ಯಾಟೋ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ಪೆರಿನೊ ಅವರ ಹೇಳಿಕೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾಯಕ್ಕಾಗಿ ಶೋಭರಾಜ್ ವಿಶ್ವಸಂಸ್ಥೆಗೆ ಮೊರೆ
ಮುಂಬೈ ದಾಳಿ: ವಿಳಂಬ ಕಾರ್ಯಾಚರಣೆಗೆ ಇಸ್ರೇಲ್ ಟೀಕೆ
ಜಗತ್ತಿನ 20 ದೇಶಗಳು 'ಅತೀ ಅಪಾಯಕಾರಿ': ಟೆಲಿಗ್ರಾಫ್
ಭಾರತ ಗಡಿಯಲ್ಲಿ ಪಾಕ್ ಸೇನೆ ಹೆಚ್ಚಳ?
ಉಗ್ರರಿಗೆ ಬಲಿಯಾದವರಿಗೆ ಇಸ್ರೇಲಿಗಳ ಕಂಬನಿ
ಮುಂಬೈ ದಾಳಿ: ಪ್ರಧಾನಿಗೆ ಒಮಾಮ ಕರೆ