ಮುಂಬೈ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬ ಭಾರತದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಸೂಕ್ತ ಸಾಕ್ಷ್ಯಾಧಾರವನ್ನು ನೀಡಲಿ ಎಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಮಂಗಳವಾಗ ಆಗ್ರಹಿಸಿದ್ದಾರೆ.ಮುಂಬೈ ದಾಳಿಯ ಹಿಂದೆ ಕೆಲವು ಉಗ್ರಗಾಮಿ ಸಂಘಟನೆಗಳಿವೆ ಎಂಬುದಾಗಿ ಭಾರತ ಹೇಳಿದೆ, ಆದರೆ ಅದು ಸಾಕ್ಷ್ಯವಲ್ಲ ಎಂದಿರುವ ಪಾಕ್, ಭಾರತ ನಿಖರವಾದ ಸಾಕ್ಷಿಯನ್ನು ನೀಡಿದಲ್ಲಿ ನಾವು ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ಅವರು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಆ ನಿಟ್ಟಿನಲ್ಲಿ ದಾಳಿಯ ಹಿಂದೆ ಪಾಕ್ ಕೈವಾಡ ಇರುವ ಬಗ್ಗೆ ಸಾಕ್ಷಿ ನಮ್ಮ ಕೈಸೇರಿದ ನಂತರ ನಾವು ನಮ್ಮ ನಿಲುವನ್ನು ವ್ಯಕ್ತಪಡಿಸುವುದಾಗಿ ಗಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಭಾರತದ ವಾಣಿಜ್ಯ ನಗರಿಯಾದ ಮುಂಬೈಯಲ್ಲಿ ನ.26ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ವಿದೇಶಿಯರು ಸೇರಿದಂತೆ ಸುಮಾರು 200ಮಂದಿ ಸಾವನ್ನಪ್ಪಿದ್ದು, 300ಕ್ಕಿಂತಲೂ ಅಧಿಕ ಜನರು ಗಾಯಗೊಂಡಿದ್ದರು. |