ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಥಾಯ್‌ಲ್ಯಾಂಡ್‌ನ ಪ್ರಧಾನಿ ಸೊಮಾಚಿ ವಾಂಗ್‌ಸ್ವಾತ್ ನೇತೃತ್ವದ ಆಡಳಿತಾರೂಢ ಸರಕಾರವನ್ನು ಥಾಯ್ ಸಂಸದೀಯ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಥಾಯ್ ಸರಕಾರದ ವಜಾಕ್ಕೆ ಮುಖ್ಯ ನ್ಯಾಯಾಧೀಶ ಚಾಟ್ ಚೊನ್ಲಾವರ್ನ್ ಅವರನ್ನೊಳಗೊಂಡ ಒಂಬತ್ತು ಮಂದಿಯ ನ್ಯಾಯಪೀಠ ಒಮ್ಮತದ ಅಭಿಪ್ರಾಯದಿಂದ ಈ ತೀರ್ಪು ನೀಡಿರುವುದಾಗಿ ಹೇಳಿದೆ.
ಆ ನಿಟ್ಟಿನಲ್ಲಿ ಆಡಳಿತಾರೂಢ ಪೀಪಲ್ಸ್ ಪವರ್ ಪಾರ್ಟಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕಾರಿ ವರಿಷ್ಠರು ಕೂಡ ಮುಂದಿನ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಿದೆ.
ರಾಜಕೀಯ ಅರಾಜಕತೆ ಥಾಯ್‌ನಲ್ಲಿ ಉಲ್ಬಣಿಸಿರುವ ಬೆನ್ನಲ್ಲೇ ಭಾನುವಾರ ಸರಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ 51ಮಂದಿ ಗಾಯಗೊಂಡಿದ್ದರು.
ಮಾಜಿ ಪ್ರಧಾನಿ ತಾಕ್ಸಿನ್ ಶಿನವಾತ್ರಾ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಿದ ನಂತರ ಥಾಯ್‌ನಾದ್ಯಂತ ಪ್ರತಿಭಟನೆ, ಹಿಂಸಾಚಾರ ಆರಂಭಗೊಂಡಿತ್ತು. |