ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಯೋತ್ಪಾದನೆ ಚರ್ಚೆ: ಮೆನನ್ ಅಮೆರಿಕಕ್ಕೆ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ಚರ್ಚೆ: ಮೆನನ್ ಅಮೆರಿಕಕ್ಕೆ ಭೇಟಿ
ಭಾರತದ ವಿದೇಶಾಂಗ ಕಾರ್ಯದರ್ಶಿಯಾದ ಶಿವಶಂಕರ ಮೆನನ್ ಎರಡು ದಿನದ ಭೇಟಿಯ ಅಂಗವಾಗಿ ಅಮೆರಿಕಕ್ಕೆ ಆಗಮಿಸಿದ್ದು, ಅವರು ನಿಗದಿತ ವೇಳಾಪಟ್ಟಿಯನ್ವಯ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ವಿಲಿಯಮ್ ಬರ್ನ್ಸ್ ಮತ್ತು ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅವರು ಅಮೆರಿಕಕ್ಕೆ ಸೋಮವಾರ ಆಗಮಿಸಿದ್ದು, ಅವರು ಕಳೆದ ವಾರ ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸ್ಥೂಲ ಚಿತ್ರಣವನ್ನು ನೀಡಲಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಎರಡು ರಾಷ್ಟ್ರಗಳ ದ್ವಿ ಪಕ್ಷೀಯ ಸಮಸ್ಯೆಯನ್ನು ಬಗೆಹರಿಸಿ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವುದು ಭೇಟಿಯ ಪ್ರಮುಖ ಉದ್ದೇಶವಾಗಿದ್ದು, ಮುಂಬೈಯಲ್ಲಿ ಉಗ್ರರು ನಡೆಸಿದ ದಾಳಿ ಚರ್ಚೆಯ ಪ್ರಧಾನ ವಿಷಯವಾಗಲಿದೆ. ಇದೇ ವೇಳೆ ಮೆನನ್ ಸೆನೆಟ್‌ನ ಸಚಿವರನ್ನು ಹಾಗೂ ಮತ್ತು ಸೆನೆಟ್ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೇಪಾಳಕ್ಕೆ ನೂರು ಮಿ.ಡಾಲರ್ ನೆರವು: ಚೀನಾ
ದಾಳಿ ಬಗ್ಗೆ ಅಮೆರಿಕ ಮೊದಲೇ ಎಚ್ಚರಿಸಿತ್ತು: ವರದಿ
ಕೋರ್ಟ್‌‌ನಿಂದ ಥಾಯ್ ಆಡಳಿತರೂಢ ಸರಕಾರ ವಜಾ
ಮುಂಬೈ ದಾಳಿ: ಪುರಾವೆ ನೀಡಲು ಪಾಕ್ ಆಗ್ರಹ
ದಾಳಿ: ಪಾಕ್ ಪೂರ್ಣ ಸಹಕಾರ ನೀಡಬೇಕು: ರೈಸ್
ಚೀನಾ : ಕಲ್ಲಿದ್ದಲು ಗಣಿ ದುರಂತಕ್ಕೆ 15 ಬಲಿ