ಮುಂಬೈ ಭಯೋತ್ಪಾದನಾ ದಾಳಿ ತನಿಖೆಯನ್ನು ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ನಡೆಸಲು ತಯಾರಿರುವುದಾಗಿ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಂಗಳವಾರ ತಿಳಿಸಿದ್ದಾರೆ.
ಆದರೆ ಭಾರತ ದಾಳಿಗೆ ಸಂಬಂಧಿಸಿದಂತೆ ಪಾಕ್ ಸರಕಾರದ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ ಖುರೇಷಿ, ತನಿಖೆಗೆ ಪಾಕಿಸ್ತಾನ ಪೂರ್ಣ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಅಲ್ಲದೇ ಮೂರು ದಿನ, ಮೂರು ರಾತ್ರಿ ವಾಣಿಜ್ಯ ನಗರಿ ಮುಂಬೈಯನ್ನು ತಲ್ಲಣಗೊಳಿಸಿದ್ದ ಭಯೋತ್ಪಾದನಾ ದಾಳಿಯ ಸಂಬಂಧಿಸಿದಂತೆ ಜಂಟಿಯಾಗಿ ತನಿಖೆ ನಡೆಸುವ ಪ್ರಸ್ತಾಪನ್ನಿಟ್ಟಿದೆ.
ಅದೇ ರೀತಿ ಈ ಸಂದರ್ಭದಲ್ಲಿ ದೇಶದ ಜನರು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದ್ದು ತುಂಬಾ ಅಗತ್ಯವಾಗಿದೆ ಎಂದು ಒತ್ತಿ ಹೇಳಿದ ಅವರು, ಭಾರಕ ಪಾಕ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |