ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ದಾಳಿ: ರೈಸ್ ಭಾರತಕ್ಕೆ ಆಗಮನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿ: ರೈಸ್ ಭಾರತಕ್ಕೆ ಆಗಮನ
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಡುತ್ತಿರುವ ಸಂದರ್ಭದಲ್ಲಿಯೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಬುಧವಾರ ಬೆಳಿಗ್ಗೆ ಭಾರತಕ್ಕೆ ಆಗಮಿಸಿದ್ದಾರೆ.

ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಭಾರತಕ್ಕೆ ನಿಷ್ಪಕ್ಷಪಾತವಾಗಿ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕೆಂದು ರೈಸ್ ಈ ಮೊದಲೇ ಒತ್ತಾಯಿಸಿದ್ದು, ಇಂದು ಬೆಳಿಗ್ಗೆ ನವದೆಹಲಿಗೆ ಆಗಮಿಸಿರುವ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಸೂಕ್ತ ಪುರಾವೆಗಳ ಕುರಿತು ರೈಸ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಮುಂಬೈಯ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರು ಉಪಯೋಗಿಸಿರುವ ಸೆಟಲೈಟ್ ಫೋನ್‌ ಕೂಡ ಸಿಕ್ಕಿರುವುದು ಪ್ರಕರಣಕ್ಕೆ ಬಲವಾದ ಸಾಕ್ಷಿ ದೊರಕಿದಂತಾಗಿದೆ. ಈಗಾಗಲೇ ಅಮೆರಿಕದ ಎಫ್‌ಬಿಐ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿ: ಜಂಟಿ ತನಿಖೆಗೆ ಪಾಕ್ ಪ್ರಸ್ತಾಪ
ಭಯೋತ್ಪಾದನೆ ಚರ್ಚೆ: ಮೆನನ್ ಅಮೆರಿಕಕ್ಕೆ ಭೇಟಿ
ನೇಪಾಳಕ್ಕೆ ನೂರು ಮಿ.ಡಾಲರ್ ನೆರವು: ಚೀನಾ
ದಾಳಿ ಬಗ್ಗೆ ಅಮೆರಿಕ ಮೊದಲೇ ಎಚ್ಚರಿಸಿತ್ತು: ವರದಿ
ಕೋರ್ಟ್‌‌ನಿಂದ ಥಾಯ್ ಆಡಳಿತಾರೂಢ ಸರಕಾರ ವಜಾ
ಮುಂಬೈ ದಾಳಿ: ಪುರಾವೆ ನೀಡಲು ಪಾಕ್ ಆಗ್ರಹ