ಕುಡನ್‌ಕುಳಂನಲ್ಲಿ ನಿರ್ಮಾಣಗೊಳ್ಳುತ್ತಿರುವ 4 ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್ ಪರಮಾಣು ಸ್ಥಾವರದ ಯೋಜನೆಯ ಅಂಗವಾಗಿಭಾರತ ಮತ್ತು ರಷ್ಯಾ ನಡುವೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.
ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಮೂರು ದಿನಗಳ ಭಾರತ ಭೇಟಿ ನಿಮಿತ್ತ ಬುಧವಾರ ದೆಹಲಿಗೆ ಆಗಮಿಸುತ್ತಿದ್ದು, ಈ ವೇಳೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇರುವುದಾಗಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಕುಡನ್‌ಕುಳಂ ಪವರ್ ಪ್ಲ್ಯಾಂಟ್ ಯೋಜನೆಯ ಹೆಚ್ಚಿನ ನಾಲ್ಕು ಪರಮಾಣು ಸ್ಥಾವರಕ್ಕಾಗಿ ರಷ್ಯಾವು ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಭಾರತದೊಂದಿಗೆ ಸಹಕರಿಸಿ ಕಾರ್ಯನಿರ್ವಹಿಸಲಾಗುವುದೆಂದು ಆರ್‌ಐಎ ನೊವೊಸ್ಟಿ ಅವರ ಹೇಳಿಕೆಯನ್ನು ರಷ್ಯಾ ಪರಮಾಣು ಶಕ್ತಿ ವಿಭಾಗದ ಸಿಇಒ ಆದ ಸೆರ್ಜಿ ಕಿರಿಯೊಂಕಿ ತಿಳಿಸಿದರು.
ಇದೇ ವೇಳೆ ಭಾರತದ ಪರಮಾಣು ಶಕ್ತಿ ಯೋಜನೆಗೆ ರಷ್ಯಾದಿಂದ ಪರಮಾಣು ಇಂಧನವನ್ನು ಪೂರೈಕೆಗೊಳಿಸುವ ಒಪ್ಪಂದಕ್ಕೆ ಸಹ ಸಹಿ ಹಾಕಲಿದೆ. |