ಯಾವುದೇ ಒತ್ತೆ ಹಣವನ್ನು ಪಡೆಯದೇ ಸೊಮಾಲಿ ಕಡಲ್ಗಳ್ಳರು ಕಳೆದ ತಿಂಗಳು ಅಪಹರಿಸಿದ್ದ ಯೆಮೆನ್ ಕಾರ್ಗೊ ಹಡಗನ್ನು ಬಿಡುಗಡೆಗೊಳಿಸಿರುವುದಾಗಿ ಸೊಮಾಲಿ ಸಚಿವ ಸೆಮಿಆಟೋನೊಮಸ್ ಅವರು ತಿಳಿಸಿದ್ದಾರೆ.
ಅಪಹೃತ ಹಡಗಿನಲ್ಲಿ ಎಂಟು ಮಂದಿ ಸಿಬ್ಬಂದಿಗಳಿದ್ದರು. ಸ್ಥಳೀಯ ಅಧಿಕಾರಿಗಳ ಮನವಿ ಮೇರೆಗೆ ಕಡಲ್ಗಳ್ಳರು ಮಂಗಳವಾರ ರಾತ್ರಿ ಯೆಮೆನ್ ಹಡಗನ್ನು ಬಂಧಮುಕ್ತಗೊಳಿಸಿರುವುದಾಗಿ ಮತ್ತೊಬ್ಬ ಸಚಿವ ಅಲಿ ಅಬ್ದಿ ಅವರು ವಿವರಿಸಿದ್ದಾರೆ.
ಮೂರು ಮಂದಿ ಯೆಮೆನ್, ಮೂರು ಸೊಮಾಲಿಯಾದ ಮೂರು ಹಾಗೂ ಪನಾಮದ ಇಬ್ಬರು ಸಿಬ್ಬಂದಿಗಳನ್ನೊಳಗೊಂಡ ಹಡಗನ್ನು ಅಪಹರಿಸಿದ್ದ ಸಂದರ್ಭದಲ್ಲಿ ಸೊಮಾಲಿ ಕಡಲ್ಗಳ್ಳರು ಮೊದಲು 2ಮಿಲಿಯನ್ ಡಾಲರ್ ಒತ್ತೆ ಹಣವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
ಕಳೆದ ತಿಂಗಳು ಅರಬ್ಬಿ ಸಮುದ್ರ ಪ್ರದೇಶದಲ್ಲಿ ಹಡಗನ್ನು ಅಪಹರಿಸಲಾಗಿತ್ತು, ಪ್ರಸಕ್ತ ಸಾಲಿನಲ್ಲಿ ಕಡಲ್ಗಳ್ಳರು ಒಟ್ಟು 40ಹಡಗನ್ನು ಅಪಹರಿಸಿದ್ದರು. |