ಮುಂಬೈ ದಾಳಿಯ ಹಿಂದಿನ ರೂವಾರಿಗಳ ಪತ್ತೆಗಾಗಿ ಅಮೆರಿಕ ರಕ್ಷಣಾ ಇಲಾಖೆಯ ವರಿಷ್ಠಾಧಿಕಾರಿಗಳನ್ನು ಭಾರತಕ್ಕೆ ಕಳುಹಿಸುವುದಾಗಿ ತಿಳಿಸಿದೆ.
ಈಗಾಗಲೇ ಮುಂಬೈ ಭಯೋತ್ಪಾದಕರು ದಾಳಿಯಲ್ಲಿ 200ಮಂದಿ ಸಾವನ್ನಪ್ಪಿದ್ದರು, ಘಟನೆಯ ತನಿಖೆಗಾಗಿ ಅಮೆರಿಕದ ಎಫ್‌ಬಿಐ ತಂಡ ಕೂಲಂಕಷ ಪರಿಶೀಲನೆ ನಡೆಸುತ್ತಿದ್ದು, ಇದೀಗ ರಕ್ಷಣಾ ಇಲಾಖೆಯ ವರಿಷ್ಠರು ಭಾರತಕ್ಕೆ ಆಗಮಿಸುತ್ತಿರುವುದಾಗಿ ಹೇಳಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ರೋಬರ್ಟ್ ಗಾಟ್ಸ್ ಅವರು ಈ ವಿಷಯವನ್ನು ಖಚಿತಪಡಿಸಿದ್ದು,ರಕ್ಷಣಾ ಇಲಾಖೆಯ ಜಂಟಿ ಸಹಾಯಕ ವರಿಷ್ಠ ಅಡ್ಮಿರಲ್ ಮೈಕ್ ಮುಲ್ಲೆನ್ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದಿರುವ ರೋಬರ್ಟ್, ಮುಂಬೈ ದಾಳಿಯ ಹಿಂದಿನ ಪಾತಕಿಗಳನ್ನು ಪತ್ತೆ ಹಚ್ಚುವುದು ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದ್ದಾರೆ. |