ನೆರೆಯ ಭಾರತದಲ್ಲಿ ನಡೆದಿರುವ ಭಯೋತ್ಪಾದನಾ ದಾಳಿಯ ಬೇರನ್ನು ಕಂಡು ಹಿಡಿಯಲು ಸಹಕರಿಸಲು ಮುಂದಾಗಬೇಕು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಪಾಕಿಸ್ತನದ ಮೇಲೆ ಮತ್ತ ಒತ್ತಡ ಹೇರಿದ್ದಾರೆ.
ಭಾರತದಲ್ಲಿ ಬಂದಿಳಿದ ರೈಸ್ ಉಗ್ರರು ದಾಳಿಗೆ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದು, ಅಲ್ಲಿನ ನಾಯಕರು ಮತ್ತು ಸೇನಾ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಉಗ್ರರ ನೆಲೆಗಳ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಲು ಅಮಂರಿಕ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಮುಂಬೈಯಲ್ಲಿ ನಡೆಸಿರುವ ದಾಳಿಯ ಕುರಿತಂತೆ ಪಾಕಿಸ್ತಾನವು ಬಲವಾದ ಮತ್ತು ಪರಿಣಾಮಕಾರಿ ಉತ್ತರ ನೀಡುವ ಅವಶ್ಯಕತೆ ಇದೆ ಎಂದು ಇಸ್ಲಾಮಾಬಾದಿಗೆ ತೆರಳುವ ಹಾದಿಯಲ್ಲಿ ರೈಸ್ ವರದಿಗಾರರೊಂದಿಗೆ ಮಾತನಾಡುತ್ತಾ ನುಡಿದರು. |