ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದೊಂದಿಗೆ ಸಹಕಾರಕ್ಕೆ ಬದ್ಧ: ಜರ್ದಾರಿ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದೊಂದಿಗೆ ಸಹಕಾರಕ್ಕೆ ಬದ್ಧ: ಜರ್ದಾರಿ ಘೋಷಣೆ
ಉಗ್ರರ ದಮನಕ್ಕೂ ಸಿದ್ದ - ಪಾಕ್ ಭರವಸೆ
ಕಳೆದ ವಾರ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪಾಕ್ ಭಾರತದೊಂದಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಭರವಸೆ ನೀಡಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಅವರು ಗುರುವಾರ ಪಾಕ್‌ಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ, ಮುಂಬೈ ದಾಳಿ ಕುರಿತು ಭಾರತದೊಂದಿಗೆ ಸಹಕರಿಸಲು ಬದ್ಧ ಎಂಬುದಾಗಿ ಜರ್ದಾರಿ ಭರವಸೆ ನೀಡಿದ್ದು, ಪಾಕ್‌ನ ಈ ಪ್ರತಿಕ್ರಿಯೆಗೆ ತಾನು ತೃಪ್ತಿ ಹೊಂದಿರುವುದಾಗಿ ರೈಸ್ ಈ ಸಂದರ್ಭದಲ್ಲಿ ಹೇಳಿದರು.

ದಾಳಿ ತನಿಖೆಗೆ ಸಹಕಾರ ನೀಡುವುದಲ್ಲದೇ, ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿಯೂ ಪಾಕ್ ಬದ್ಧವಾಗಿದೆ ಎಂದು ಜರ್ದಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಭಯೋತ್ಪಾದನಾ ನಿಗ್ರಹದ ಬಗ್ಗೆ ಕಠಿಣ ನಿಲುವು ತಳೆಯಬೇಕು ಎಂದು ರೈಸ್ ಭಾರತದಿಂದ ಪಾಕ್‌ಗೆ ತೆರಳುವ ಮುನ್ನ ಆಗ್ರಹಿಸಿದ್ದರು. ಮುಂಬೈ ದಾಳಿ ಮತ್ತು ಭಯೋತ್ಪಾದನಾ ನಿಗ್ರಹದ ಕುರಿತಾಗಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ರೈಸ್ ಇಂದು ಮಧ್ನಾಹ್ನ ಪಾಕ್‌ಗೆ ಭೇಟಿ ನೀಡಿದ್ದರು.

ಮುಂಬೈ ದಾಳಿಯನ್ನು ನಡೆಸಿದ ಉಗ್ರರ ಕುರಿತಾಗಿ ಬಲವಾದ ಸಾಕ್ಷ್ಯ ದೊರೆತ ಬಳಿಕ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜರ್ದಾರಿ ರೈಸ್ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಭರವಸೆ ನೀಡಿರುವುದಾಗಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಜಾಗತಿಕವಾಗಿ ಬೆದರಿಕೆಯನ್ನೊಡ್ಡುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಅಮೆರಿಕ ಕೂಡ ಸಹಕಾರ ನೀಡಲಿದೆ ಎಂದು ರೈಸ್ ಭರವಸೆ ನೀಡಿದರು.

ಮುಂಬೈಯ ದಾಳಿಯ ಹಿಂದೆ ಪಾಕ್ ಮೂಲದ ಭಯೋತ್ಪಾದನಾ ಸಂಘಟನೆ ಕೈವಾಡ ಇದ್ದಿರುವುದಾಗಿ ಭಾರತ ಆರೋಪಿಸಿದ್ದರೂ ಕೂಡ, ಪಾಕ್ ಭಾರತದ ಹೇಳಿಕೆಯನ್ನು ತಳ್ಳಿಹಾಕಿದ್ದಲ್ಲದೆ, ಈ ಬಗ್ಗೆ ನಿಖರವಾದ ಪುರಾವೆ ಒದಗಿಸುವಂತೆ ಪ್ರತಿಕ್ರಿಯೆ ನೀಡಿತ್ತು. ಅಲ್ಲದೇ ಕುಖ್ಯಾತ 21 ಉಗ್ರರನ್ನು ಭಾರತಕ್ಕೆ ಒಪ್ಪಿಸುವಂತೆ ಸಲ್ಲಿಸಿದ್ದ ಬೇಡಿಕೆಯನ್ನೂ ಕೂಡ ಪಾಕ್ ತಿರಸ್ಕರಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಲವಾದ ಸ್ಪಂದನೆ ನೀಡಲು ಪಾಕ್‌ಗೆ ರೈಸ್ ಒತ್ತಾಯ
ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರೈಸ್
ದಾಳಿ ತನಿಖೆ: ಅಮೆರಿಕದ ರಕ್ಷಣಾ ವರಿಷ್ಠಾಧಿಕಾರಿ ಭಾರತಕ್ಕೆ
ಮುಂಬೈಯ ದಾಳಿಯ ಹಿಂದೆ ಲಷ್ಕರ್: ಮೈಕ್
ಸೊಮಾಲಿ ಕಡಲ್ಗಳ್ಳರಿಂದ ಯೆಮೆನ್ ಹಡಗು ಬಂಧಮುಕ್ತ
ಥಾಯ್‌ಲ್ಯಾಂಡ್: ಪ್ರತಿಭಟನೆ ಅಂತ್ಯ