ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೊಜಿ ಟಿಬೆಟ್ ಬಿಕ್ಕಟ್ಟಿನ ಬಗ್ಗೆ ದಲೈಲಾಮಾ ಅವರೊಂದಿಗೆ ಚರ್ಚೆಯನ್ನು ಕೈಗೊಂಡರೆ ಅದು ಚೀನಾ ಮತ್ತು ಫ್ರಾನ್ಸ್ ದೇಶಗಳೊಳಗಿನ ವಾಣಿಜ್ಯ ಬಂಧಕ್ಕೆ ತೊಡಕಾಗಿ ಪರಿಣಮಿಸಲಿದೆಯೆಂದು ಚೀನಾ ಗುರುವಾರ ಎಚ್ಚರಿಕೆ ನೀಡಿದೆ.
ಫ್ರಾನ್ಸ್ ದೇಶದೊಂದಿಗಿನ ವಾಣಿಜ್ಯ ಸಂಬಂಧ ಮೂತ್ರವಲ್ಲದೆ ಚೀನಾವು ಯೋಜನೆಗೆ ಸಹ ಪ್ರಾಮುಖ್ಯವನ್ನು ನೀಡುತ್ತಿದ್ದು, ಇವೆರೆಡು ನಿಕಟವಾದ ಸಂಪರ್ಕವನ್ನು ಹೊಂದಿದೆಯೆಂದು ಚೀನಾದ ವಿದೇಶಾಂಗ ವಕ್ತಾರ ಲಿ ಜಾನ್‌ಚೂ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಉತ್ತಮವಾದ ವಾತಾವರಣದಲ್ಲಿ ಮೂತ್ರ ಉಭಯ ದೇಶಗಳೊಳಗಿನ ವಾಣಿಜ್ಯ ಬಂಧವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಿದೆಯೆಂದು ಅವರು ಹೇಳಿದರು.
ಟಿಬೆಟ್‌ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದಲೈಲಾಮಾರನ್ನು ಪೋಲೆಂಡ್‌ನಲ್ಲಿ ವಾರಾಂತ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ ಸರ್ಕೊಜಿ ಭೇಟಿ ಮಾಡಲು ನಿರ್ಧರಿಸಿದ್ದು, ಆದರೆ ಯಾವುದೇ ವಿದೇಶಿ ನಾಯಕರು ದಲೈಲಾಮಾರೊಂದಿಗೆ ಮಾತುಕತೆಯನ್ನು ನಡೆಸುವುದನ್ನು ಚೀನಾವು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದೆ. |