ರಷ್ಯಾದಲ್ಲಿ ವರ್ಷಕ್ಕೆ 30ಸಾವಿರ ಜನರು ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದು, ಈ ಅಂಕಿ-ಅಂಶ ಯುರೋಪಿನ ಒಟ್ಟು ಲೆಕ್ಕಚಾರದ ಎಂಟು ಪಟ್ಟು ಅಧಿಕವಾಗಿದೆಯೆಂದು ರಷ್ಯಾದ ಡ್ರಗ್ಸ್ ನಿಗ್ರಹ ಸಂಸ್ಥೆ ತಿಳಿಸಿದೆ.
1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ ರಷ್ಯಾದಲ್ಲಿ ಡ್ರಗ್ಸ್ ದುಶ್ಚಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ವೇಗವಾಗಿ ಏರುತ್ತಿದ್ದು, ಇದು ಯುರೋಪ್ ಒಕ್ಕೂಟಗಳಿಗಿಂತ ಎಂಟು ಪಟ್ಟು ಜಾಸ್ತಿಯಾಗಿದೆಯೆಂದು ರಷ್ಯಾದ ಡ್ರಗ್ಸ್ ಫೆಡರೆಷನ್‌ನ ನಿಯಂತ್ರಣ ಘಟಕ(ಎಫ್‌ಎಸ್‌ಕೆಎನ್)ದ ಅಂಕಿ-ಅಂಶ ತಿಳಿಸುತ್ತದೆ.
ರಷ್ಯಾದಲ್ಲಿ ಡ್ರಗ್ಸ್ ಚಟದಲ್ಲಿ ವರ್ಷಕ್ಕೆ ಬಲಿಯಾಗುತ್ತಿರುವ 30,000 ಮಂದಿಯಲ್ಲಿ ಹೆಚ್ಚಿನ ಸಂಖ್ಯೆಯವರು ಹದಿಹರೆಯದವರಾಗಿದ್ದಾರೆಂದು ಎಫ್‌ಎಸ್‌ಕೆಎನ್‌ನ ನಿರ್ದೇಶಕರಾದ ವಿಕ್ಟರ್ ಇವನೊವ್ ತಿಳಿಸಿದರು.
ರಷ್ಯಾದಲ್ಲಿ 2006ರಲ್ಲಿ ದುಶ್ಚಟಕ್ಕೆ ಒಳಗಾದವರ ಸಂಖ್ಯೆ 70ಸಾವಿರ, ಅದು 2007ರಲ್ಲಿ 78,000ಕ್ಕೆ ಹೆಚ್ಚಳಗೊಂಡಿತ್ತು. ಅಫ್ಘಾನಿಸ್ಥಾನದಿಂದ ಆಮದಾಗುವ ಹೆರಾಯಿನ್ ಎಂಬ ಮಾದಕ ದ್ರವ್ಯಕ್ಕೆ ರಷ್ಯಾದ 90 ಶೇಕಡಾ ಜನರು ಬಲಿಯಾಗುತ್ತಿರುವುದಾಗಿ ಅವರು ತಿಳಿಸಿದರು. |