ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಷ್ಕರ್ ವರಿಷ್ಠ ಹಫೀಜ್ ಸೆರೆಗೆ ಅಮೆರಿಕ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಷ್ಕರ್ ವರಿಷ್ಠ ಹಫೀಜ್ ಸೆರೆಗೆ ಅಮೆರಿಕ ಆಗ್ರಹ
ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾದ ಮೇಲೆ ನಿಷೇಧ ಹೇರಿ, ಸಂಘಟನೆಯ ವರಿಷ್ಠ ಹಫೀಜ್ ಮೊಹಮ್ಮದ್ ಸಯೀದ್‌ನನ್ನು ಕೂಡಲೇ ಬಂಧಿಸಬೇಕೆಂದು ಅಮೆರಿಕ ಆಗ್ರಹಿಸಿದೆ.

ಮುಂಬೈಯಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಯ ಹಿಂದೆ ಪಾಕಿಸ್ತಾನದ ಮೂಲದ ಲಷ್ಕರ್ ಎ ತೊಯ್ಬಾದ ಕೈವಾಡ ಇರುವುದು ಸ್ಪಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಲಷ್ಕರ್ ಸಂಘಟನೆ ಮೇಲೆ ನಿಷೇಧ ಹೇರುವಂತೆ ಪಾಕ್ ಮೇಲೆ ಅಮೆರಿಕ ಒತ್ತಡ ಹೇರಿದೆ.

ಗುರುವಾರ ಅನಿರೀಕ್ಷಿತವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಅಮೆರಿಕದ ವಿದೇಶಾಂಗ ಸಚಿವೆ ಕಾಂಡೊಲೀಸಾ ರೈಸ್ ಅವರು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರೊಂದಿಗೆ ಮಾತನಾಡುತ್ತ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಅಲ್ಲದೇ ಈ ಮೊದಲೇ ಪಾಕ್‌ನ ಆರ್ಮಿ ವರಿಷ್ಠ ಅಶ್ಫಾಕ್ ಕಿಯಾನಿ ಅವರನ್ನು ಭೇಟಿಯಾಗಿದ್ದ ಅಮೆರಿಕದ ಅಡ್ಮಿರಲ್ ಮೈಕ್ ಮುಲ್ಲೆನ್ ಕೂಡ ಲಷ್ಕರ್ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದರು.

ಮುಂಬೈ ದಾಳಿಯಲ್ಲಿ ಲಷ್ಕರ್ ಕೈವಾಡ ಇದೆ ಎಂದು ಭಾರತ ಖಚಿತಪಡಿಸುತ್ತಿದ್ದರೂ ಕೂಡ, ಪಾಕ್ ಹಾಗೂ ಲಷ್ಕರ್ ವರಿಷ್ಠ ಸಯೀದ್ ನಕಾರ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕದ ಬೇಡಿಕೆಯನ್ನು ಪಾಕಿಸ್ತಾನ ಸರಕಾರ ಈಡೇರಿಸುತ್ತದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಷ್ಯಾ: ವರ್ಷಕ್ಕೆ 30ಸಾವಿರ ಜನ ಡ್ರಗ್ಸ್‌ಗೆ ಬಲಿ
ಟಿಬೆಟ್ ವಿವಾದ: ಫ್ರಾನ್ಸ್‌ಗೆ ಚೀನಾ ಎಚ್ಚರಿಕೆ
ಭಾರತದೊಂದಿಗೆ ಸಹಕಾರಕ್ಕೆ ಬದ್ಧ: ಜರ್ದಾರಿ ಘೋಷಣೆ
ಬಲವಾದ ಸ್ಪಂದನೆ ನೀಡಲು ಪಾಕ್‌ಗೆ ರೈಸ್ ಒತ್ತಾಯ
ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರೈಸ್
ದಾಳಿ ತನಿಖೆ: ಅಮೆರಿಕದ ರಕ್ಷಣಾ ವರಿಷ್ಠಾಧಿಕಾರಿ ಭಾರತಕ್ಕೆ