ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹಜ್ ಯಾತ್ರೆ : ಭದ್ರತೆಗಾಗಿ 1 ಲಕ್ಷ ರಕ್ಷಣಾ ಸಿಬ್ಬಂದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಜ್ ಯಾತ್ರೆ : ಭದ್ರತೆಗಾಗಿ 1 ಲಕ್ಷ ರಕ್ಷಣಾ ಸಿಬ್ಬಂದಿ
ಮುಸ್ಲಿಮ್ ಸಮುದಾಯದ ಪವಿತ್ರವಾದ ವಾರ್ಷಿಕ ಹಜ್ ಯಾತ್ರೆಯು ಮೆಕ್ಕಾದಲ್ಲಿ ಶನಿವಾರ ಆರಂಭವಾಗಲಿದ್ದು, ಸುರಕ್ಷತೆಯ ಅಂಗವಾಗಿ ಒಂದು ಲಕ್ಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆಯೆಂದು ಸೌದಿ ಅರೇಬಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದ ವಿವಿಧ ಭಾಗಗಳಿಂದಾಗಿ ಸುಮಾರು ಮ‌ೂರು ಮಿಲಿಯನ್ ಹಜ್ ಯಾತ್ರಿಕರು ಪವಿತ್ರ ನಗರವಾದ ಮೆಕ್ಕಾಕ್ಕೆ ಪ್ರಸ್ತುತ ವರ್ಷದಲ್ಲಿ ಭೇಟಿ ನೀಡಲಿದ್ದಾರೆ.

ಐದು ದಿನಗಳ ಕಾಲ ನಡೆಯಲಿರುವ ಹಜ್‌ನಲ್ಲಿ ಯಾವುದೇ ರೀತಿಯ ಬೆದರಿಕೆಯ ಸೂಚನೆಯು ಇದುವರೆಗೆ ಲಭಿಸಿಲ್ಲ, ಯಾವುದೇ ಅನೀರಿಕ್ಷಿತ ಘಟನೆಯನ್ನು ಎದುರಿಸಲು ರಕ್ಷಣಾ ಪಡೆ ಸಿದ್ದವಾಗಿದೆ ಎಂದು ಸೌದಿಯ ಆಂತರಿಕ ಸಚಿವರಾದ ಪ್ರಿನ್ಸ್ ನೆಯೆಫ್‌ರ ಹೇಳಿಕೆಯನ್ನು ಸೌದಿ ಮಾಧ್ಯಮದ ವರಿದಿಯೊಂದು ತಿಳಿಸಿದೆ.

ಪ್ರತಿ ವರ್ಷವು ಹಜ್ ಯಾತ್ರಿಕರಿಗಾಗಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸುತ್ತಿದ್ದು, ಹಜ್ ಜನಸ್ತೋಮ, ವಾಹನ ದಟ್ಟಣೆಯ ನಿಯಂತ್ರಣ, ಯಾತ್ರಿಕರ ಸುರಕ್ಷತೆ ಮತ್ತು ನೂಕುನುಗ್ಗಲುಗಳನ್ನು ತಡೆಯಲು ಪ್ರತ್ಯೇಕವಾಗಿ ಗಮನಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಷ್ಯಾ ಅಧ್ಯಕ್ಷ ಮೆಡ್ವಡೇವ್ ಭಾರತಕ್ಕೆ
ಲಷ್ಕರ್ ವರಿಷ್ಠ ಹಫೀಜ್ ಸೆರೆಗೆ ಅಮೆರಿಕ ಆಗ್ರಹ
ರಷ್ಯಾ: ವರ್ಷಕ್ಕೆ 30ಸಾವಿರ ಜನ ಡ್ರಗ್ಸ್‌ಗೆ ಬಲಿ
ಟಿಬೆಟ್ ವಿವಾದ: ಫ್ರಾನ್ಸ್‌ಗೆ ಚೀನಾ ಎಚ್ಚರಿಕೆ
ಭಾರತದೊಂದಿಗೆ ಸಹಕಾರಕ್ಕೆ ಬದ್ಧ: ಜರ್ದಾರಿ ಘೋಷಣೆ
ಬಲವಾದ ಸ್ಪಂದನೆ ನೀಡಲು ಪಾಕ್‌ಗೆ ರೈಸ್ ಒತ್ತಾಯ