ಲಷ್ಕರ್ ಎ ತೊಯ್ಬಾ ಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್‌ನನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸುವುದಿಲ್ಲ, ಅಲ್ಲದೇ ಪಾಕ್ ಸರಕಾರ ಭಾರತದ ಬೇಡಿಕೆಯನ್ನು ಮನ್ನಿಸಿ ಲಷ್ಕರ್‌ನ ಸಯೀದ್‌ನನ್ನು ಹಸ್ತಾಂತರಿಸುವಷ್ಟು ದುರ್ಬಲ ಅಲ್ಲ ಎಂದು ಜಮಾತ್ ಉದ್ ದಾವಾ ಹೇಳಿದೆ.
ಅಲ್ಲದೇ ಮುಂಬೈ ದಾಳಿಯ ಹಿಂದೆ ಯಾವುದೇ ಕಾರಣಕ್ಕೂ ಲಷ್ಕರ್ ಎ ತೊಯ್ಬಾ ಸಂಘಟನೆಯ ಕೈವಾಡ ಇಲ್ಲ ಎಂದು ಕೂಡ ಜಮಾತ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂಬೈ ದಾಳಿಯ ಹಿಂದೆ ಪಾಕಿಸ್ತಾನ ಮೂಲಕ ಲಷ್ಕರ್ ಎ ತೊಯ್ಬಾ ಸಂಘಟನೆ ಕೈವಾಡ ಇರುವುದಾಗಿ ಆರೋಪಿಸಿತ್ತು. ಈ ಬಗ್ಗೆ ಅಮೆರಿಕ ಕೂಡ ಲಷ್ಕರ್ ಸಂಘಟನೆ ನಿಷೇಧ ಹಾಗೂ ಸಂಘಟನೆಯ ವರಿಷ್ಠ ಹಫೀಜ್ ಬಂಧನಕ್ಕೆ ಆಗ್ರಹಿಸಿತ್ತು.
ಆದರೆ ಇದೀಗ ಪಾಕ್ ಹಾಗೂ ಲಷ್ಕರ್ ಸಂಘಟನೆ ಮುಂಬೈ ದಾಳಿಯ ಹಿಂದೆ ತಮ್ಮ ಸಹಭಾಗಿತ್ವ ಇಲ್ಲ ಎಂದೇ ವಾದಿಸುತ್ತಿವೆ, ಆ ನಿಟ್ಟಿನಲ್ಲಿ ಭಾರತ ಬೇಡಿಕೆ ಸಲ್ಲಿಸಿದ ಕೂಡಲೇ ತನ್ನದೇ ದೇಶದ ಪ್ರಜೆಯೊಬ್ಬನನ್ನು ಭಾರತಕ್ಕೆ ಹಸ್ತಾಂತರಿಸುವಷ್ಟು ಪಾಕಿಸ್ತಾನ ಸರಕಾರ ದುರ್ಬಲವಾಗಿಲ್ಲ ಎಂದು ಜಮಾತ್ ವಕ್ತಾರ ಅಬ್ದುಲ್ಲಾ ಮುನ್‌ತಾಜಿರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |