ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆಡ್ವಾಣಿಯನ್ನು ನಮಗೊಪ್ಪಿಸಿ: ಜಮಾತ್ ಉಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿಯನ್ನು ನಮಗೊಪ್ಪಿಸಿ: ಜಮಾತ್ ಉಲ್
ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿರುವ 21ಮಂದಿ ಕುಖ್ಯಾತ ಉಗ್ರರನ್ನು ತನಗೆ ಒಪ್ಪಿಸಬೇಕೆಂದು ಭಾರತದ ಪಾಕ್‌ಗೆ ಬೇಡಿಕೆ ಸಲ್ಲಿಸಿದ್ದರೆ, ಅದಕ್ಕೆ ಪ್ರತಿಯಾಗಿ ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಕೆಲವು ವ್ಯಕ್ತಿಗಳನ್ನು ಪಾಕಿಸ್ತಾನದ ವಶಕ್ಕೆ ಒಪ್ಪಿಸುವಂತೆ ನಿಷೇಧಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ಧಾರ್ಮಿಕ ಘಟಕವಾದ ಜಮಾತ್ ಉಲ್ ದವಾ ಹಾಗೂ ರಾಜಕಾರಣಿಗಳು ಆಗ್ರಹಿಸಿದ್ದಾರೆ.

ಮುಂಬೈ ದಾಳಿಯ ಹಿಂದೆ ಪಾಕ್ ಕೈವಾಡ ಇದೆ ಎಂಬ ಭಾರತದ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಕರೆದಿದ್ದ ಸಭೆಯಲ್ಲಿ ಕೆಲವು ರಾಜಕಾರಣಿಗಳು ಈ ಪ್ರಸ್ತಾಪ ಎತ್ತಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಭಾರತದೊಂದಿಗೆ ಶಾಂತಿ ಕಾಯ್ದುಕೊಳ್ಳುವಂತೆ ಮತ್ತು ಉದ್ವಿಗ್ನ ಸ್ಥಿತಿಯ ಶಮನಕ್ಕೆ ರಾಜತಾಂತ್ರಿಕ ಮಾರ್ಗಗಳನ್ನು ಆರಿಸಿಕೊಳ್ಳುವಂತೆ ಒತ್ತಾಯಿಸಿದರೆ, ಕೆಲವರು ಕಠಿಣ ನಿಲುವು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಆಡ್ವಾಣಿ ಮತ್ತು ಇತರ ಹಿಂದೂ ಉಗ್ರರನ್ನು ಒಪ್ಪಿಸಬೇಕೆಂದು ಬೇಡಿಕೆ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ನಿಯಮಾವಳಿ ಹಾಗೂ ಪಾಕಿಸ್ತಾನದ ಜನರ ಬೇಡಿಕೆಗೆ ಅನುಗುಣವಾಗಿಯೇ ಇದೆ ಎಂಬುದಾಗಿ ಜಮಾತ್ ಉಲ್ ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ ಆಗ್ರಹಿಸಿದೆ,

ಲಷ್ಕರ್ ಸಹೀದ್ ಧಾರ್ಮಿಕ ನಾಯಕನಾಗಿದ್ದು, ಭಯೋತ್ಪಾದನೆಯನ್ನು ಎಂದಿಗೂ ಬೆಂಬಲಿಸಿಲ್ಲ ಎಂದು ದವಾ ವೆಬ್‌ಸೈಟ್‌ನಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ: ಜೈಲು ಶಿಕ್ಷೆ ಕಡಿಮೆಯಾಗಬೇಕೆ,ಶುಶ್ರೂಷೆ ಮಾಡಿ
ಲಷ್ಕರ್ ಹಫೀಜ್‌ನನ್ನು ಪಾಕ್ ಹಸ್ತಾಂತರಿಸುವುದಿಲ್ಲ: ಜಮಾತ್
ಹಜ್ ಯಾತ್ರೆ : ಭದ್ರತೆಗಾಗಿ 1 ಲಕ್ಷ ರಕ್ಷಣಾ ಸಿಬ್ಬಂದಿ
ಭಾರತ - ರಷ್ಯಾ ನಾಗರಿಕ ಅಣು ಒಪ್ಪಂದ
ಲಷ್ಕರ್ ವರಿಷ್ಠ ಹಫೀಜ್ ಸೆರೆಗೆ ಅಮೆರಿಕ ಆಗ್ರಹ
ರಷ್ಯಾ: ವರ್ಷಕ್ಕೆ 30ಸಾವಿರ ಜನ ಡ್ರಗ್ಸ್‌ಗೆ ಬಲಿ